ಅಂತೂ ಇಂತೂ ಸಿಕ್ತು ಪ್ರತಿಭಟನೆಗೆ ಫಲ
ಕೇಬಲ್ ವೈಯರ್ ಅಳವಡಿಕೆಗೆ ರಸ್ತೆಯಲ್ಲಿ ಖಾಸಗಿ ಸಂಸ್ಥೆ ಗುಂಡಿಕೊರೆದಿತ್ತು.ಈ ನಡೆಯನ್ನ ವಿರೋಧಿಸಿ ವ್ಯಕ್ತಯೊಬ್ಬರು ಗುಂಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ರು.ಬೆಳ್ಳಗೆಯಿಂದ ಸಂಜೆವರೆಗೆ ಅನಿಲ್ ಎಂಬ ವ್ಯಕ್ತಿ ಗುಂಡಿಯಲ್ಲೆ ಕುಳಿತು ಪ್ರತಿಭಟನೆ ನಡೆಸಿದ್ದರು.ಅನಿಲ್ ಕುಮಾರ್ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ.ಅನಧಿಕೃತವಾಗಿ ರಸ್ತೆ ಗುಂಡಿ ತೆಗೆದಿದ್ದ ಖಾಸಗಿ ಸಂಸ್ಥೆ ವಿರುದ್ದ ಹನುಮಂತ ನಗರ ಪೋಲಿಸ್ ಸ್ಟೇಷನ್ ನಲ್ಲಿ FIR ದಾಖಲಾಗಿದೆ.ಇಂಜಿನಿಯರ್ ವಿದ್ಯಾ ಎಂಬವರು ನೀಡಿರುವ ಕಂಪ್ಲೇಂಟ್ ಮೇರೆಗೆ ಪೊಲೀಸರು ದೂರು ದಾಖಲಿಸಿದ್ದಾರೆ.ಖಾಸಗಿ ಸಂಸ್ಥೆ ಹಾಗೂ ಮಂಜುನಾಥ್ ಎಂಬವರ ಮೇಲೆ FIR ದಾಖಲು ಮಾಡಿದ್ದಾರೆ.