ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಅನುಪಮಾ ಶೆಣೈ

ಮಂಗಳವಾರ, 3 ಅಕ್ಟೋಬರ್ 2017 (11:42 IST)
ಮಾಜಿ ಡಿವೈಎಸ್`ಪಿ ಅನುಪಮಾ ಶೆಣೈ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿದೆ. ಹೊಸ ಪಕ್ಷ ಕಟ್ಟುವ ಮೂಲಕ ರಾಜಕೀಯ ಎಂಟ್ರಿಗೆ ಮಾಜಿ ಪೊಲೀಸ್ ಅಧಿಕಾರಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸದ್ಯ ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾನೆ. ಪೊಲೀಸ್ ಹಿನ್ನೆಲೆ ಇರುವುದರಿಂದ ಪೊಲಿಸಿಂಗ್ ಮಾದರಿಯಲ್ಲೇ ಪಕ್ಷದ ರೂಪುರೇಷೆ ಸಿದ್ಧಪಡಿಸುತ್ತೇನೆ. ಒಂದು ತಿಂಗಳಲ್ಲಿ ಪಕ್ಷದ ಘೋಷಣೆ ಯೋಜನೆಯನ್ನ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಸೂಪರ್ ಸ್ಟಾರ್ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪಿಸಿದ ಬಳಿಕ ಅವರನ್ನ ಭೇಟಿಯಾಗಿ ಅನುಪಮಾ ಶೆಣೈ ಚರ್ಚಿಸಿದ್ದರು.  ಈ ಹಿಂದೆ, ಸಿಎಂ ಸಿದ್ದರಾಮಯ್ಯ ವಾಚ್ ಕುರಿತಾಗಿ ಸುದ್ದಿಗೋಷ್ಠಿ ನಡೆಸಿದ್ದ ಅನುಪಮಾ ಶೆಣೈ ಸರ್ಕಾರದ ವಿರುದ್ಧ ಸಿಡಿದೆದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಒಂದೂವರೆ ವರ್ಷದಿಂದ ತಟಸ್ಥರಾಗಿರುವ ಅನುಪಮಾ ಶೆಣೈ ಹೊಸ ಪಕ್ಷದ ಮೂಲಕ ರಾಜಕೀಯ ಎಂಟ್ರಿಗೆ ಮುಂದಾಗಿದ್ದಾರೆ. ಈ ಸಂಬಂಧ ಉಡುಪಿಯ ಉಚ್ಚಿಲದಲ್ಲಿ ಸಮಾನ ಮನಸ್ಕರ ಜೊತೆ ಒಂದು ಸುತ್ತಿನ ಸಭೆ ಸಹ ನಡೆಸಿದ್ದಾರೆ. ಹೊಸ ಪಕ್ಷ ರಚನೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ಸಂಗ್ರಹಕ್ಕೂ ಅನುಪಮಾ ಶೆಣೈ ಮುಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ