ಮಂಡ್ಯದಲ್ಲಿ ಮುಂದುವರಿದ ಕೈ ಕಾರ್ಯಕರ್ತರ ಗಲಾಟೆ

ಮಂಗಳವಾರ, 30 ಅಕ್ಟೋಬರ್ 2018 (19:18 IST)
ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ತಾರಕಕ್ಕೇ ಏರಿವೆ. ಏತನ್ಮಧ್ಯೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ಮತ್ತೆ ಮುಂದುವರಿಯಿತು.

ಸಕ್ಕರೆ ನಾಡಿನ ಕಾಂಗ್ರೆಸ್ ಪಾಳೆಯದಲ್ಲಿ ಗಲಾಟೆ, ಗದ್ದಲ, ಗೊಂದಲ ಮುಂದುವರಿದಿದೆ. ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ  ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ಮತ್ತೆ ಮುಂದುವರಿದಿದೆ.

ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿ ಎಂದು ಕಾಂಗ್ರೆಸ್ ಮುಖಂಡರು ಭಾಷಣ ಮಾಡಿದರು. ಕಾಂಗ್ರೆಸ್ ಬೆಂಬಲಿಸಲು ವಿರೋಧಿಸಿ ವೇದಿಕೆ ಮೇಲೇರಿ ಕೈ ಕಾರ್ಯಕರ್ತರು ಗದ್ದಲ ಮಾಡಿದರು.

ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮನವಿಗೂ  ಕೈ ಕಾರ್ಯಕರ್ತರು ಒಪ್ಪಲಿಲ್ಲ. ವೇದಿಕೆ ಮೇಲೇರಿ‌ ನಾಯಕರೊಂದಿಗೆ ಕಾರ್ಯಕರ್ತರ ಮಾತಿನ ಚಕಮಕಿಯೂ ನಡೆಯಿತು.

ಸಭೆಯಲ್ಲಿ ಸಚಿವ ಜಾರ್ಜ್, ಮಾಜಿ ಸಚಿವರಾದ ಮಹದೇವಪ್ಪ, ಟಿ.ಬಿ.ಜಯಚಂದ್ರ, ಅಭ್ಯರ್ಥಿ ಶಿವರಾಮೇಗೌಡ ಇತರರು ಭಾಗಿಯಾಗಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ