ಸಿದ್ದರಾಮಯ್ಯ ಸೂಚಿಸಿದ್ರೆ ಜಮಖಂಡಿಗೆ ಹೋಗಿ ಪ್ರಚಾರ ಮಾಡುವೆ: ಕಾಂಗ್ರೆಸ್ ತೀರ್ಮಾನವೇ ಅಂತಿಮ ಎಂದ ದೇವೇಗೌಡರು
ಸಿದ್ದರಾಮಯ್ಯ ಸೂಚಿಸಿದರೆ ಜಮಖಂಡಿಗೆ ಹೋಗಿ ಪ್ರಚಾರ ಮಾಡುವೆ. ಜಾತ್ಯಾತೀತ ವ್ಯವಸ್ಥೆ ಉಳಿಯಬೇಕಿದ್ದರೆ ಕಾಂಗ್ರೆಸ್ ಜತೆ ಹೋಗುವುದು ಅನಿವಾರ್ಯ. ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ತೀರ್ಮಾನವೇ ಅಂತಿಮ ಎಂದು ದೇವೇಗೌಡರು ಹೇಳಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೂಚಿಸಿದ್ದಕ್ಕೆ ಎಚ್ ಡಿಕೆ ಸಿಎಂ ಆದರು. ಮುಂದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸುತ್ತೇವೆ. ಒಂದು ವೇಳೆ ರಾಹುಲ್ ಪ್ರಧಾನಿಯಾಗುತ್ತಾರೆ ಎಂದಾದರೆ ಅದಕ್ಕೆ ನಮ್ಮ ಸಹಮತವಿದೆ ಎಂದೂ ಗೌಡರು ಹೇಳಿದ್ದಾರೆ.