ಮಠದ ಕೈಂಕರ್ಯಕ್ಕೆ ಉಸ್ತುವಾರಿ ನೇಮಕ

ಸೋಮವಾರ, 17 ಅಕ್ಟೋಬರ್ 2022 (13:29 IST)
ಚಿತ್ರದುರ್ಗ : ಮುರುಘಾ ಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾದಾಗಿನಿಂದ ಪೀಠಾಧಿಪತಿ ಬದಲಾವಣೆ ಕೂಗು ತಾರಕಕ್ಕೇರಿದೆ.

ಹೀಗಾಗಿ ಅದಕ್ಕೆ ಬ್ರೇಕ್ ಹಾಕಲು ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಮುರುಘಾ ಶ್ರೀ ಆಪ್ತ ಶಿಷ್ಯ ಬಸವಪ್ರಭು ಶ್ರೀಗಳನ್ನು ನೇಮಿಸಲಾಗಿದೆ. ಆದರೆ ಇದರಿಂದಾಗಿ ಮುರುಘಾ ಮಠದಲ್ಲಿ ಮತ್ತಷ್ಟು ಅಸಮಾಧಾನ ಭುಗಿಲೆದ್ದಿದೆ.

ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠಕ್ಕೆ ತನ್ನದೇ ಆದ ಐತಿಹ್ಯವಿದೆ. ಶೂನ್ಯ ಪೀಠ ಪರಂಪರೆಯ ಮಠಕ್ಕೆ ಪೀಠಾಧಿಪತಿಯೇ ಸುಪ್ರಿಂ. ಆದರೆ ಪೋಕ್ಸೋ ಕೇಸ್ನಡಿ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುರುಘಾ ಶ್ರೀ ವಿರುದ್ಧ ಮತ್ತೊದು ಕೇಸ್ ದಾಖಲಾದ ಬಳಿಕ ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಹೆಚ್. ಏಕಾಂತಯ್ಯ ನೇತೃತ್ವದ ಲಿಂಗಾಯತ ಸಮುದಾಯದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರದ ಗಮನ ಸೆಳೆದಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ