ಬಿಜಿಎಸ್ ವಿದ್ಯಾಸಂಸ್ಥೆಯಿಂದ ಶಿಕ್ಷಣಕ್ಕೆ ಪ್ರೇರಣೆ ಸಚಿವ ಕೆ.ಗೋಪಾಲಯ್ಯ ಶ್ಲಾಘನೆ

ಬುಧವಾರ, 18 ಜನವರಿ 2023 (18:14 IST)
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಹಲವೆಡೆ ಬಿಜಿಎಸ್ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪರಮಪೂಜ್ಯ ಬಾಲಗಂಗಾಧರನಾಥ ಶ್ರೀಗಳು ಕ್ಷೇತ್ರದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೇರಣೆಯಾಗಿದ್ದಾರೆ ಎಂದು ಸ್ಥಳೀಯ ಶಾಸಕರು ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದರು.
 
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೃಷಭಾವತಿ ನಗರದ ವಾರ್ಡ್ ಸಂಖ್ಯೆ 102 ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪಾರ್ಕ್ ನಲ್ಲಿಂದು ಮುಂಜಾನೆ ಶ್ರೀ ಗಳ 78 ನೇ ಜಯಂತೋತ್ಸವದ ಅಂಗವಾಗಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
 
ಕ್ಷೇತ್ರದ ಮಕ್ಕಳು ಇಂಜಿನಿಯರಿಂಗ್ ಕಲಿಯಲು ಅನುಕೂಲವಾಗುವಂತೆ ಬಿಜಿಎಸ್ ತಾಂತ್ರಿಕ ಕಾಲೇಜು ಆರಂಭಿಸಿದರು.ಎಲ್ ಕೆ ಜಿಯಿಂದ ಸ್ನಾತಕೋತ್ತರ ಪದವಿವರೆಗೂ ಮತ್ತು ಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಕಟ್ಟಿ ಸಂಸ್ಥೆಯ ಆವರಣದಲ್ಲಿ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣ ಮಾಡಿದ್ದಾರೆ.‌ ಮುಂದಿನ ತಿಂಗಳು ಈ ದೇವಾಲಯ ಉದ್ಘಾಟನೆಯಾಗಲಿದೆ ಎಂದರು.
 
ಸದರಿ ಪಾರ್ಕ್ ನ್ನು ‌ಈ‌ ಹಿಂದೆ ಬೇರೆ ಹೆಸರಿನಲ್ಲಿ ಕರೆಯಲಾಗುತಿತ್ತು.‌ಇಲ್ಲಿ ಪರಮಪೂಜ್ಯ ಬಾಲಗಂಗಾಧರನಾಥ ಶ್ರೀ ಗಳ‌ ಪ್ರತಿಮೆ ನಿರ್ಮಾಣ ಮಾಡಿ ಅವರ ಹೆಸರನ್ನೆ ಇದಕ್ಕೆ ಇಡಬೇಕೆಂದು ತೀರ್ಮಾನಿಸಿ ಇದೀಗ ಆ ಕಾರ್ಯ ನೆರವೇರಿಸಲಾಗಿದೆ ಎಂದರು.
 
ಈ ಸಂದರ್ಭದಲ್ಲಿ ಸೋಮೆನಾಥಸ್ವಾಮೀಜಿ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯರಾಮಯ್ಯ, ನಿಸರ್ಗ ಜಗದೀಶ್, ಜಯಸಿಂಹ, ಶ್ರೀನಿವಾಸ್ ಹಾಗೂ ಸ್ಥಳೀಯ ಮುಖಂಡರು ‌ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ