ಶ್ವಾನಗಳಿಗೂ ಅದ್ಧೂರಿ ವಿವಾಹ!

ಬುಧವಾರ, 18 ಜನವರಿ 2023 (18:09 IST)
ಈಗಿನ ಕಾಲದಲ್ಲಿ ಪ್ರಾಣಿ ಪ್ರಿಯರಿಗೇನು ಕೊರತೆ ಇಲ್ಲ ಬಿಡಿ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ನಾಯಿ, ಬೆಕ್ಕುಗಳು ಇರುತ್ತದೆ. ಅದ್ರಲ್ಲು ನಾಯಿಯನ್ನು ಸಾಕುವ ಜನರೇ ಹೆಚ್ಚು.  ಹಳ್ಳಿಗಳಲ್ಲಿ ನಾಯಿಗಳು ಮನೆಯನ್ನು ಕಾವಲು ಕಾಯುತ್ತವೆ. ಪ್ರಾಣಿಗಳು ಮನುಷ್ಯರ ಜೊತೆಗೆ ಇದ್ದು ಅವೂ ಕೂಡ ಮಾನವರಂತೆಯೇ ಬಿಹೇವಿಯರ್​ ಫಾಲೋ ಮಾಡುತ್ತವೆ. ಅದೇ ರೀತಿಯಾಗಿ ನಾಯಿಗಳಿಗೂ ಕ್ರೇಜ್​ ಇರುತ್ತದೆ. ಇದೀಗ ಒಂದು ವಿಡಿಯೋ ವೈರಲ್​​ ಆಗ್ತಿದೆ. ಈ ವಿಡಿಯೋದಲ್ಲಿ ನಾಯಿಗಳಿಗೆ ಮದುವೆ ಮಾಡಿಸುತ್ತಿರುವುದನ್ನ ಕಾಣಬಹುದಾಗಿದೆ. ಟಾಮಿ ಮತ್ತು ಜೆಲ್ಲಿ ಎಂಬ ನಾಯಿಗಳಿಗೆ ವಿವಾಹವನ್ನು ನಿಗದಿಪಡಿಸಲಾಗಿದೆ. ಡೊಳ್ಳು ಬಾರಿಸುವುದರೊಂದಿಗೆ ವಧು-ವರರಿಗೆ ಮಾಲೆ ಹಾಕುವ ಮೂಲಕ ವಿಶಿಷ್ಟ ವಿವಾಹಕ್ಕೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಜೆಲ್ಲಿಯ ಕುಟುಂಬದಿಂದ ಬಂದ ಜನರು ಟಾಮಿಗೆ ತಿಲಕವನ್ನೂ ಹಚ್ಚಿದರು. ಅದರ ನಂತರ, ಸಾಮಾನ್ಯ ಮನುಷ್ಯರ ಹಾಗೆಯೇ ಸಡಗರ ಸಂಭ್ರಮದ ಜೊತೆಗೆ ಮೆರವಣಿಗೆಯನ್ನು ಮಾಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ