ಕಾಲೇಜು ವಿದ್ಯಾರ್ಥಿ ಜೀವನ ಅತ್ಯಂತ ಖುಷಿ ದಿನಗಳು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬುಧವಾರ, 18 ಜನವರಿ 2023 (17:44 IST)
ರಾಜಕೀಯ ವ್ಯಕ್ತಿಯಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸದಲ್ಲಿದ್ದೇವೆ. ರಾಜಕೀಯ ಸಾಕಷ್ಟು ಸವಾಲಿನ ವೃತ್ತಿಯಾದರೂ ತೃಪ್ತಿ ತಂದಿದೆ.ಜೆ.ಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯ ಮಂತ್ರಿಗಳು ತಮ್ಮ ವಿದ್ಯಾರ್ಥಿ ಜೀವನ, ಜೀವನಾನುಭ, ರಾಜಕೀಯ ವೃತ್ತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೆ  ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು. 
 
ನಿಮ್ಮ ಜೀವನದಲ್ಲಿ ಯಾವ ವೃತ್ತಿ, ಯಾವ ಹಂತ ನಿಮಗೆ ಸಾಕಷ್ಟು ಖುಷಿ ನೀಡಿದೆ ?  ಎಂಬ ಕೂ ಸಂಸ್ಥಾಪಕ ಅಪ್ರಮೇಯ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು  ಉತ್ತರಿಸುತ್ತಾ,  " ವಿದ್ಯಾರ್ಥಿ  ಜೀವನವೇ ಅತ್ಯುತ್ತಮ. ನಾನು ವಿದ್ಯಾರ್ಥಿಯಾದ ದಿನಗಳನ್ನು ಸಾಕಷ್ಟು ನೆನೆಯುತ್ತೇನೆ. ಕೊನೆ ಬೆಂಚ್‌ನಲ್ಲಿ ಕೂರುವ ವಿದ್ಯಾರ್ಥಿಯ ದಿನಗಳು ಅತ್ಯಂತ  ಖುಷಿ ನೀಡಿವೆ. ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿ ಖುಷಿ ನೀಡಿದರೆ,   ಇನ್ನೊಬ್ಬರಿಗೆ ಉದ್ಯೋಗ ದೊರಕಿಸುವುದು  ಮತ್ತೊಂದು ರೀತಿಯ ತೃಪ್ತಿಯ  ಭಾವ ನೀಡುತ್ತದೆ"  ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ