ಚುನಾವಣೆ ಅಧಿಕಾರಿಗಳು ಕೂಡಲೇ ಹೆಬ್ಬಾಳ್ಕರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹಣ ಹಂಚುವುದು ಕಾಯಕವಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬಿಜೆಪಿ ನಾಯಕಿ ಭಾರತೀ ಶೆಟ್ಟಿ ಗುಡುಗು
ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಣದ ಅವ್ಯವಹಾರದಲ್ಲಿ ತೊಡಗಿರುವುದು ಇದು ಮೊದಲಲ್ಲ. ಈಗಾಗಲೇ ಅವರ ಮನೆಯಲ್ಲಿ ಹಣದ ಕಂತೆ ಕಂತೆಗಳು ದೊರೆತಿದ್ದು ಪ್ರಕರಣ ದಾಖಲಾಗಿದೆ. ಇದೀಗ ಹಣ ಹಂಚುತ್ತಿರುವ ವಿಡಿಯೋ ನೋಡಿದ ಕೂಡಲೇ ಹೆಬ್ಬಾಳ್ಕರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತೀ ಶೆಟ್ಟಿ ಒತ್ತಾಯಿಸಿದ್ದಾರೆ.