ಕುಡಿದ ಮತ್ತಿನಲ್ಲಿ ಪರಿಚಿತನನ್ನ ಹತ್ಯೆಗೈದ ಬಾಲಪರಾಧಿಯ ಬಂಧನ

ಶನಿವಾರ, 5 ನವೆಂಬರ್ 2022 (17:18 IST)
ಕುಡಿದ ಅಮಲಿನಲ್ಲಿ ಪರಿಚಿತನನ್ನ ಹತ್ಯೆಗೈದಿದ್ದ ಬಾಲಾಪರಾಧಿಯ ಬಂದಿಸುವಲ್ಲಿ ಕುಮಾರಸ್ವಾಮಿ ‌ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.ಅ.21ರಂದು ಕೆ.ಎಸ್.ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರ ಸರ್ಕಲ್ ನಲ್ಲಿ‌ ಮರದ ದೊಣ್ಣೆಯಿಂದ ಮುಖೇಶ್ ಎಂಬಾತನ ತಲೆಗೆ ಹೊಡೆದು ಹತ್ಯೆಗೈಯ್ಯಲಾಗಿತ್ತು,ಕೊಲೆಯಾದ ಮುಖೇಶ್ ಹಾಗೂ ಆರೋಪಿ ಇಬ್ಬರೂ ಸಹ ಬಿಹಾರ ಮೂಲದವರಾಗಿದ್ದು ಕಳೆದ ಹಲವು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು.ಮೊದಲಿಗೆ ಮೃತ ಮುಖೇಶ್ ಸಿಲಿಕಾನ್ ಸಿಟಿಗೆ ಬಂದಿದ್ದ ತನ್ನ ಊರಿನವನೇ ಎಂದು ಆರೋಪಿಯನ್ನ ಟೈಲ್ಸ್ ವರ್ಕ್ ಕೆಲಸಕ್ಕೆ ಕರೆದುಕೊಂಡು ಬಂದಿದ್ದ. ಆರಂಭದಲ್ಲಿ ಇಬ್ಬರು ಕೂಡ ಕೆಲಸ ಮಾಡಿಕೊಂಡಿದ್ರು.ಇಬ್ಬರೂ ಸಹ ಕಾಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಉಳಿದುಕೊಳ್ಳುತ್ತಿದ್ದರು.ಅಕ್ಟೋಬರ್ 21ರಂದು ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಇದರಿಂದ. ರೊಚ್ಚಿಗೆದ್ದ ಆರೋಪಿ ದೊಣ್ಣೆಯಿಂದ ತಲೆಗೆ ಹೊಡೆದು ಮುಖೇಶ್ ನನ್ನ ಕೊಲೆಗೈದಿದ್ದ ನಂತರ , ರಾತ್ರೋರಾತ್ರಿ ಸ್ಥಳದಿಂದ ಕಾಲ್ಕಿತ್ತಿದ್ದ ಆರೋಪಿ ಪಾಟ್ನಾ ರೈಲು ಹತ್ತಿ ಊರು ಸೇರಿದ್ದ .ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಎಸ್.ಲೇಔಟ್ ಪೊಲೀಸರು.ನಂತರ ಈಗ ಕೊನೆಗೂ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ