ಪಿಂಚಣಿ ಮಾಡಿಸ್ತೇನೆ ಎಂದು ವೃದ್ಧೆಯರನ್ನ ನಂಬಿಸಿ ಒಡವೆ ಬಿಚ್ಚಿಸಿಕೊಂಡು ವಂಚಿಸುತ್ತಿದ್ದ ವಂಚಕ ಅರೆಸ್ಟ್

ಭಾನುವಾರ, 20 ನವೆಂಬರ್ 2022 (20:57 IST)
ಆಧಾರ್ ಕಾರ್ಡ್, ಪಿಂಚಣಿ ಮಾಡಿಸಿಕೊಡುತ್ತೇನೆಂದು ವೃದ್ದೆಯರನ್ನು ನಂಬಿಸಿ ಅವರಿಂದ ಒಡವೆ ತೆಗೆಸಿಕೊಂಡು ವಂಚಿಸಿ ಪರಾರಿಯಾಗುತ್ತಿದ್ದ ವಂಚಕನನ್ನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ತಿಲಕ್ ನಗರದ ಅಬ್ದುಲಾ ಬಂಧಿತ ಆರೋಪಿ. ಒಂಟಿಯಾಗಿ ಹೋಗುವವರನ್ನು ಗುರಿಯಾಗಿಸಿ ಮಹಿಳೆಯರನ್ನು ಪರಿಚಿತರಂತೆ ಮಾತನಾಡಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪಿಂಚಣಿ ಮಾಡಿಸಿಕೊಡುವುದಾಗಿ ನಂಬಿಸುತ್ತಿದ್ದ‌. ಈತನ ಮಾತನ್ನ ನಂಬಿ ಆತ ಕರೆದೊಯ್ದ ಜಾಗಕ್ಕೆ ಹೋಗುತ್ತಿದ್ದರು‌. ಸರ್ಕಾರಿ ಕಚೇರಿ ಮುಂದೆ ಬೈಕ್ ನಿಲ್ಲಿಸಿ ಒಳಹೋಗಿ ಬಂದವನಂತೆ ನಟಿಸಿ ಪಿಂಚಣಿ ಮಾಡಿಸಿಕೊಡುತ್ತಾರೆ‌‌.‌ ನಾನು ಹಣ ತಂದಿಲ್ಲ. ನಿಮ್ಮ ಬಳಿ ಹಣವಿದ್ದರೆ ಕೊಡಿ ಇಲ್ಲದಿದ್ದರೆ ಹಾಕಿರುವ ಒಡವೆ ಕೊಡಿ. ಗಿರಾವಿ ಇಟ್ಟು ಹಣ ತರುವೆ ಎಂದು ಪುಸಲಾಯಿಸುತ್ತಿದ್ದ. ಪಿಂಚಣಿಗೆ ಆಸೆಬಿದ್ದು ಒಡವೆ ವೃದ್ದೆಯರು ಬಿಚ್ಚು ಕೊಡುತ್ತಿದ್ದರು‌‌‌‌. ಗಿರಾವಿಗೆ ಇಡುವುದಾಗಿ ನಂಬಿಸಿ ಎಸ್ಕೇಪ್ ಆಗುತ್ತಿದ್ದ‌. ಇದೇ ತಂತ್ರ ಬಳಸಿ ನ.11ರಂದು ಕೋಣನಕುಂಟೆ ಠಾಣಾ ವ್ಯಾಪ್ತಿಯ ಸೌಧಾಮಿ ನಗರ ಬಸ್ ನಿಲ್ದಾಣದಲ್ಲಿ ಗಂಡನಿಗಾಗಿ ಕಾಯುತ್ತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿಕೊಂಡು ಪರಿಚಿತರಂತೆ ಲೋಕರೂಡಿ ಮಾತುಗಳನ್ನ ಆಡಿ ಅವರ ವಿಶ್ವಾಸ ಗಳಿಸಿ ಯಾಮಾರಿಸುತ್ತಿದ್ದ‌. ನಂತರ ಯಾವೂದೋ ಮನೆ ಮುಂದೆ ಬೈಕ್ ನಿಲ್ಲಿಸಿ ಸರ್ಕಾರಿ ಸವಲತ್ತುಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿ ಕಚೇರಿಯೊಳಗೆ  ಸಿಸಿಟಿವಿಯಿದ್ದು ಅಲ್ಲಿಗೆ ಚಿನ್ನಾಭರಣ ತರುವಂತಿಲ್ಲ ಎಂದು ಹೇಳಿ ಮಹಿಳೆಯಿಂದ ಬಿಚ್ಚಿಸಿ ಪರ್ಸ್ ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿ ಮೋಸ ಮಾಡುತ್ತಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ.ವಂಚನೆ ಪ್ರಕರಣದಲ್ಲಿ ಮೂರು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇರೆಗೆ ಹೊರಬಂದಿದ್ದ‌. ಈತನ ವಿರುದ್ಧ 12ಕ್ಕೂ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ