ಹ್ಯಾಕರ್ ಮೂಲಕ ಅಮೆಜಾನ್ ಕಂಪನಿಗೆ ಚೀಟಿಂಗ್ ಮಾಡ್ತಿದ್ದ ಆರೋಪಿಯನ್ನ ಬಂಧಿಸಿ ಸುಮಾರು 52ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ ಗಳು, ಕ್ಯಾಶ್ ವಶಕ್ಕೆ ಪಡೆಯಲಾಗಿದೆ.16ಐಫೋನ್, ಐಮ್ಯಾಕ್ ಸಿಸ್ಟಮ್, 30ಲಕ್ಷ ಹಣ ಪೊಲೀಸರು ಸೀಜ್ ಮಾಡಿದ್ದಾರೆ.ಮಲಯಾಳಂ ಸಿನಿಮಾ ರೀತಿಯಲ್ಲಿ ಅಮೆಜಾನ್ ಗೆ ವಂಚನೆ ಮಾಡಿದ್ದಾರೆ.ದುಲ್ಕರ್ ಸಲ್ಮಾನ್ ಸಿನಿಮಾದ ರೀತಿಯಲ್ಲಿ ಆರೋಪಿಗಳು ವಂಚಿಸಿದ್ದಾರೆ.
ಅಮೇರಿಕಾದಲ್ಲಿ ಕೂತು ಅಮೆಜಾನ್ ಗೆ ವಂಚನೆ ಮಾಡ್ತಿದ್ದ ಹ್ಯಾಕರ್ ಮೊದಲು ಆನ್ಕೈನ್ ಮೂಲಕ ಐಫೋನ್ ಗಳನ್ನ ಬುಕ್ ಮಾಡ್ತಿದ್ರು .ನಂತರ ಅಮೇರಿಕಾದಲ್ಲಿರೋ ಹ್ಯಾಕರ್ ಗೆ ಮಾಹಿತಿ ನೀಡ್ತಿದ್ದರು.ಕೈಗೆ ಮೊಬೈಲ್ ಬಂದಿದೆ ಎಂದ ಕೂಡಲೇ ಹ್ಯಾಕರ್ ಆಟ ಶುರು ಮಾಡ್ತಿದ್ರು.ಅಮೆಜಾನ್ ಅಫೀಸಿಯಲ್ ಅಕೌಂಟ್ ನ ಹ್ಯಾಕ್ ಮಾಡಿ ವಂಚನೆ ಮಾಡ್ತಿದ್ರು.ಅಮೆಜಾನ್ ಅಕೌಂಟ್ ನಲ್ಲಿ ಬಂದಿದ್ದ ಐಫೋನ್ ರಿಟರ್ನ್ ಬಂದಿರೋ ತರ ಆಪ್ಸನ್ ಕ್ಲಿಕ್ ಮಾಡ್ತಿದ್ದ ಹ್ಯಾಕರ್ ಅಲ್ಲಿ ರಿಟರ್ನ್ ಆಪ್ಸನ್ ಓಕೆ ಆಗಿದ್ದೇ ತಡ ಆನ್ಲೈನ್ ನಲ್ಲಿ ಚಿರಾಗ್ ಗೆ ಹಣ ರೀಫಂಡ್ ಆಗ್ತಿತ್ತು.ಕಳೆದ ಒಂದು ತಿಂಗಳಿಂದ ಇದೇ ರೀತಿ ವಂಚನೆ ಮಾಡ್ತಿದ್ರು.ದೇಶಾದ್ಯಂತೆ ಇಪ್ಪತ್ತು ಕೋಟಿಗೂ ಅಧಿಕ ವಂಚನೆ ಮಾಡಿರೋ ಶಂಕೆ ವ್ಯಕ್ತವಾಗಿದೆ.