ಆಫ್ರಿಕನ್ ಪ್ರಜೆಗೆ ಕೊರೊನಾ ಸೋಂಕು: ಸಿಸಿಟಿವಿ ಆಧರಿಸಿ ಮತ್ತಷ್ಟು ಬಂಧನ?

ಮಂಗಳವಾರ, 3 ಆಗಸ್ಟ್ 2021 (17:23 IST)

ಬೆಂಗಳೂರಿನ ಜೆಸಿ ನಗರ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಜೋವಲ್ ಮಲು ಸಾವು ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಪೊಲೀಸರು ಅರ್ಮಾನ್ ಗ್ವಾಯ್, ಕ್ಲೆಮೆಂಟ್ ಬಾರ್ಕೆಮ್ಡಾ, ಯೂಸುಫ್ ಮಕೇಟಾ, ಜುವಾನೆ ಮುಕುಂಜು, ಗುಲೊರ್ಗ್ ಎಂಬುವವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿದ್ದಾರೆ. ಈ ವೇಳೆ ಓರ್ವ ಆರೋಪಿಯ ರಿಪೋರ್ಟ್ ಪಾಸಿಟಿವ್ ಬಂದಿದೆ.

ಇನ್ನೊಂದೆಡೆ ಪ್ರಕರಣ ಸಿಐಡಿಗೆ ವರ್ಗಾವಣೆ ಆಗ್ತಿದ್ದಂತೆ ತನಿಖಾಧಿಕಾರಿಗಳ ಬಳಿ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಘಟನೆ ಬಳಿಕ ಜೆಸಿ ನಗರ ಪೊಲೀಸ್ರು ಎರಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪಿಎಸ್ಐ ಲತಾ ಅವರ ದೂರಿನ ಮೇಲೆ ಒಂದು ಕೇಸ್ ದಾಖಲು ಮಾಡಿದ್ರೆ, ನಿನ್ನೆ ಆಫ್ರಿಕನ್ ಪ್ರಜೆಗಳ ಅಟ್ಟಹಾಸದ ವೇಳೆ ಬಾಲಕನೋರ್ವನಿಗೂ ಗಾಯ ಆಗಿದೆ. ಈ ಎರಡು ಕೇಸ್ ಗಳ ಸಂಬಂಧನೂ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಪ್ರೊಟೆಸ್ಟ್ ನಲ್ಲಿ ಭಾಗವಹಿಸಿರುವ ವಿಡಿಯೋವನ್ನ ಪೊಲೀಸರು ಚಿತ್ರೀಕರಣ ಮಾಡಿದ್ದು, ಅದನ್ನ ನೋಡಿ ಯಾರ್ಯಾರೂ ಇದ್ರೂ ಅನ್ನುವುದರ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸ್ತಿದ್ದಾರೆ. ಇನ್ನೂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಡಿ ವಿದೇಶಿಗರ ಮೇಲೆ NDPS ಹಾಗೂ ಫಾರಿನರ್ಸ್ ಆಕ್ಟ್ ಅಡಿಯಲ್ಲೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನೂ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಉತ್ತರ ವಿಭಾಗದ ಡಿಸಿಪಿ ಈಗಾಗಲೇ ಐದು ಜನರಿಗೆ ಯೂರಿನ್ ಟೆಸ್ಟ್ ಮಾಡಿಸಿದ್ದೇವೆ. ಅದರಲ್ಲಿ ಓರ್ವ ಪ್ರಜೆಯ ರಿಪೋರ್ಟ್ ಪಾಸಿಟಿವ್ ಬಂದಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ನಡೆಸ್ತಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ರಿಪೋರ್ಟ್ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಜೊತೆಗೆ ಸಿಐಡಿ ಅಧಿಕಾರಿಗಳಿಗೂ ಪ್ರಕರಣದ ಮಾಹಿತಿ ನೀಡಿದ್ದೇವೆ ಅಂಥ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ