ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್,ಪರ್ಸ್ ಕದಿಯುತ್ತಿದ್ದವ ಅರೆಸ್ಟ್

ಭಾನುವಾರ, 8 ಅಕ್ಟೋಬರ್ 2023 (18:00 IST)
ಬುದ್ಧಿಮಾಂದ್ಯನಂತೆ ನಟಿಸಿ ಮೊಬೈಲ್, ಪರ್ಸ್ ಕದಿಯುತ್ತಿದ್ದ ವಿನಯ್ನನ್ನು ಹೊಸಕೋಟೆ ಪೊಲೀಸರು  ಬಂಧಿಸಿದ್ದಾರೆ. ಬಂಧಿತ ಆರೋಪ ಆರೋಪಿ ವಿನಯ್ನಿಂದ ಪೊಲೀಸರು 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ನ 150ಕ್ಕೂ ಹೆಚ್ಚು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿನಯ್ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಬುದ್ದಿ ಮಾಂದ್ಯನಂತೆ ನಟಿಸುತ್ತಾ ಬಳಿಕ ನೂಕು ನುಗ್ಗಲಿನಲ್ಲಿ ಬಸ್ ಹತ್ತಿ ಪ್ರಯಾಣಿಕರಿಗೆ ಗೊತ್ತಾಗದಂತೆ ಎಗರಿಸಿ ಪಾಸ್ವರ್ಡ್ ಒಪನ್ ಮಾಡಿ ಪೋನಪೆ,ಗೂಗಲ್ ಪೇ ಮೂಲಕ ಹಣ ಲಪಡಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ