ದೇಶದಲ್ಲಿ ಮಕ್ಕಳಿಂದ ದಿನಕ್ಕೆ 4 ಗಂಟೆ ಮೊಬೈಲ್‌ ಬಳಕೆ,ಪೋಷಕರಲ್ಲಿ ಆತಂಕ..!

ಶುಕ್ರವಾರ, 29 ಸೆಪ್ಟಂಬರ್ 2023 (19:00 IST)
ದೇಶದಲ್ಲಿ 12 ರವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಮಕ್ಕಳಿಗಾಗಿ ಸುರಕ್ಷಿತ ಅಂತರ್ಜಾಲವನ್ನು ನಿಯಂತ್ರಿಸುವ ಸಂಸ್ಥೆಯಾದ ಹ್ಯಾಪಿನೆಟ್ಜ್‌ ಈ ಸಮೀಕ್ಷೆ ನಡೆಸಿದ್ದು, 12 ಮತ್ತು ಹೆಚ್ಚಿನ ವಯೋಮಾನದ ಶೇ. 69ರಷ್ಟು ಮಕ್ಕಳು ತಮ್ಮ ಸ್ವಂತ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌  ಹೊಂದಿದ್ದು Internet ಬಳಕೆಗೂ ಅನಿರ್ಬಂಧಿತ ಅನುಮತಿ ಪಡೆದಿದ್ದಾರೆ ಎಂದು ಸಂಸ್ಥೆಯು 1,500 ಪೋಷಕರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದ್ದು ಪೋಷಕರಲ್ಲಿ ಇದೀಗ ಭಾರಿ ಆತಂಕವನ್ನು ಸೃಷ್ಟಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ