ವೃದ್ಧೆಗೆ ಚಿತ್ರಾನ್ನ ತಿನ್ನಿಸಿ ನಗದು, ಮೊಬೈಲ್ ದೋಚಿ ಪರಾರಿ!

ಭಾನುವಾರ, 13 ಆಗಸ್ಟ್ 2023 (11:22 IST)
ಚಾಮರಾಜನಗರ : ವೃದ್ಧೆ ಒಬ್ಬರಿಗೆ ಚಿತ್ರಾನ್ನ ತಿನ್ನಿಸಿ 10 ಸಾವಿರ ರೂ. ಹಾಗೂ ಮೊಬೈಲ್ ದೋಚಿ ಪರಾರಿಯಾದ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಬೆಂಗಳೂರು ಮೂಲದ ರತ್ಮಮ್ಮ (70) ವಂಚನೆಗೊಳಗಾದ ವೃದ್ಧೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ರತ್ನಮ್ಮ ದೇವರ ದರ್ಶನ ಮುಗಿಸಿ ರಂಗಮಂದಿರದಲ್ಲಿ ಮಲಗಿದ್ದರು. ಈ ವೇಳೆ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಬಂದು ಮಾತಾಡಿಸಿದ್ದಾರೆ. ಬಳಿಕ ಪರಿಚಯ ಮಾಡಿಕೊಂಡು ಜೊತೆಗೆ ಮಲಗಿದ್ದಾರೆ.

ಬಳಿಕ ತಿಂಡಿಯಲ್ಲಿ ಮತ್ತು ಬರಿಸುವ ಔಷಧಿ ಬೆರಸಿ ಕೊಟ್ಟು ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ