ಹೈದರಾಬಾದ್: ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇರೆಗೆ ಹೈದರಾಬಾದ್‌ನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈಚೆಗೆ ರಾಮನವಮಿ ಆಚರಣೆ ವೇಳೆಗೆ ಮಾಧವಿ ಅವರು ಮಸೀದಿಯತ್ತ ಬಾಣ ಬಿಡುವಂತೆ ಸನ್ನೆ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇವರ ಈ ನಡವಳಿಕೆ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈಚೆಗೆ ನಡೆದ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡಿದ್ದರು.
ಮಾಧವಿ ಲತಾ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ, ಅದು ಅಪೂರ್ಣ ವಿಡಿಯೊ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆ ವಿಡಿಯೊ ಕಾರಣದಿಂದ ಯಾರ ಭಾವನೆಗಾದರೂ ನೋವು ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಎಲ್ಲರ ಭಾವನೆಗಳನ್ನು ಗೌರವಿಸುವವಳು ನಾನು ಎಂದು ಹೇಳಿದ್ದರು.