ನಾರಾಯಣ ಸೇವಾ ಸಂಸ್ಥೆ ವತಿಯಿಂದ ಬೆಂಗಳೂರಿನ ವಿವಿ ಪುರಂನಲ್ಲಿ ಕೃತಕ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ನಡೆಸಲಾಯ್ತು.ಕಾಲು-ಕೈ ಇಲ್ಲದವರಿಗೆ ಕೃತಕ ಕೈ-ಕಾಲು ಜೋಡಿಸುವ ಶಿಬಿರಕ್ಕೆ ಕ್ರೀಡಾ ಸಚಿವ ಬಿ.ನಾಗೇಂದ್ರ ಚಾಲನೆ ನೀಡಿದ್ರು.ಶಿಬಿರದಲ್ಲಿ ಭಾಗಿಯಾದ ತಜ್ಞ ವೈದ್ಯರು ಅಂಗಾಂಗಗಳ ಅವಶ್ಯಕತೆ ಇರೋ ದಿವ್ಯಾಂಗರ ಅಳತೆ ತೆಗೆದುಕೊಂಡರು. ಇನ್ನು ಈ ಶಿಬಿರಕ್ಕೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಕಲಚೇತನರು ತಮಗೆ ಹೊಸ ಜೀವನ ನೀಡಲು ಮುಂದಾಗಿರೋ ಸಂಸ್ಥೆಯ ಕಾರ್ಯಕ್ಕೆ ಅಭಿನಂದಿಸೋ ಜೊತೆಗೆ ಕೃತಕ ಕೈ-ಕಾಲುಗಳು ಸಿಗುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ರು.