ವರ್ಗಾವಣೆಯಲ್ಲಿ ಭ್ರಷ್ಟಾಚಾರ ಜಾರಿಕೊಳ್ಳುತ್ತಿರುವ ಸಿಎಂ : ಬಸವರಾಜ ಬೊಮ್ಮಾಯಿ ಆರೋಪ

ಸೋಮವಾರ, 17 ಜುಲೈ 2023 (20:21 IST)
ಟ್ರಾನ್ಸ ಫರ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ತಾವು ಲಂಚ ಪಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇರೆ ಸಚಿವರು ಲಂಚ ಪಡೆಯುತ್ತಿರುವದರ ಬಗ್ಗೆ ಜಾರಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಶ್ಯಾಡೊ ಸಿಎಂ ವಿಚಾರದ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಹಲವು ವಿಚಾರ ಎತ್ತಿದ್ದೇವೆ .ಸಿಎಂ ಆಫೀಸ್ ನಿಂದ ಹಿಡಿದು ಎಲ್ಲಾ ಕಡೆಗೂ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಟ್ರಾನ್ಸಪರನಲ್ಲಿ ನಾನು ಯಾವುದಕ್ಕೂ ಹಣ ತಗೊಂಡಿಲ್ಲಾ ಅಂತ ಸಿಎಂ ಹೇಳ್ತಾರೆ.
 
ಸಿಎಂ ಸ್ವಂತಕ್ಕೆ ಹಣ ತಗೊಂಡಿಲ್ಲಾ ಅಂತಾ ಜಾರಿಕೊಳ್ಳುತ್ತಿದ್ದಾರೆ. ಇಡೀ ಅವರ ಸರ್ಕಾರ ಮಂತ್ರಿಮಂಡಳದ ಸದಸ್ಯರು,ಭಂಟರು ಲಂಚ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.ಅಧಿಕಾರಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆ ಆಗುತ್ತಿದೆ.  ಅದನ್ನು ಮುಚ್ಚಿ ಹಾಕುವ ಸಲುವಾಗಿ ನಾನು ಲಂಚ ತೆಗೆದುಕೊಂಡಿಲ್ಲಾ. ಲಂಚ ತೆಗೆದುಕೊಂಡಿದ್ದಾರೆ‌ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಿತ್ತೆನೆ ಅಂತ ಹೇಳುತ್ತಿದ್ದಾರೆ. ಅಂದರೆ ಅದರ ಅರ್ಥ ಸರ್ಕಾರದಲ್ಲಿ ಬೇರೆಯವರು ತಗೊಂಡ್ರೆ ಮುಖ್ಯಮಂತ್ರಿಗಳ ಜವಾಬ್ದಾರಿ ಮುಗಿತಾ? ಎಲ್ಲಾ ಸ್ಪಷ್ಟವಾಗಿ ಕಾಣ್ತಾ ಇದೆ,ಸಿಎಂ ಜಾರಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದರು.ಇನ್ನು RSS ಗೆ ನೀಡಿದ್ದ ಜಮೀನು ಮಂಜೂರು ಮಾಡಿರುವುದನ್ನು ಹಿಂಪಡೆದು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅದರಲ್ಲಿ ಬಡವರ ಮಕ್ಕಳಿಗೆ,ಅನಾಥರಿಗೆ ದೊಡ್ಡ ಸಹಾಯ ಆಗುತ್ತಿದೆ. ಜನಸೇವಾ ಟ್ರಸ್ಟ್ ಕ್ಷಣದದಲ್ಲಿ ದೊಡ್ಡ ಕೆಲಸ ಮಾಡುತ್ತಿದೆ. ಕ್ಯಾಬಿನೆಟ್ ಗೆ ಅಧಿಕಾರ ಇದೆ ಹಾಗಾಗಿ ನಾವು ಜಮೀನು ಮಂಜೂರು ಮಾಡಿದ್ದೇವು. ಇದು ಸೇಡಿನ ರಾಜಕಾರಣ ಅದು ಬಹಳ ನಡೆಯೊದಿಲ್ಲ ಎಂದರು.
 
ಇನ್ನು ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕಿಕೊಂಡು ಅಡುಗೆ ಮಾಡುವಂತಿಲ್ಲ ಎಂಬ ಮಾರ್ಗಸೂಚಿ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಕ್ಕೆ ಪ್ರಶ್ನೆ ಕೇಳುತ್ತೇನೆ. ಈ ಹಿಂದೆ ಬಿಸಿಯೂಟ ತಯಾರು ಮಾಡೋರು ಬಳೆ ಹಾಕಿಕೊಂಡೇ ಕೆಲಸ ಮಾಡಿದ್ದಾರೆ‌. ಅಂದು ಯಾವ ತೊಂದರೆಯೂ ಆಗಿಲ್ಲ. ಆದರೆ ಈಗ್ಯಾಕೆ ಏಕಾಏಕಿ ಹೀಗೆ ಮಾರ್ಗಸೂಚಿ ಹೊರಡಿಸಿದ್ದಾರೆ? ಸರ್ಕಾರಕ್ಕೆ ಮಾಡುವ ಬೇರೆ ಕೆಲಸ ಇಲ್ಲ ಹತ್ತು ಹಲವು ಬೇಕಾದಷ್ಟು ಕೆಲಸಗಳು ಇದ್ದಾವೆ ಇವರು ಕೆಲಸಕ್ಕೆ ಬಾರದ ಕೆಲಸಗಳನ್ನ ಮಾಡುತ್ತಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ