ಅರವಿಂದ್ ಲಿಂಬಾವಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ

ಶನಿವಾರ, 3 ಸೆಪ್ಟಂಬರ್ 2022 (19:59 IST)
ಔಟರ್ ರಿಂಗ್ ರೋಡ್ ನವರು ಮಳೆಯಿಂದ ಆ ಕ್ಷೇತ್ರದಲ್ಲಿ ಏನಾಗಿದೆ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಅವರಿಗೆ ಎಷ್ಟು ಕೋಟಿ ನಷ್ಟ ಆಗಿದೆ ಅಂತ ಹೇಳಿದ್ದಾರೆ.ಅವರಿಗೆ ಬಾಯಿ ಇತ್ತು,ಶಕ್ತಿ ಇತ್ತು ಪತ್ರ ಬರೆದಿದ್ದಾರೆ.ಆದರೆ ಶಕ್ತಿ ಇಲ್ಲದ ಮಹಿಳೆಯರು ಶಾಸಕರಿಗೆ ಕೇಳದೇ ಇನ್ ಯಾರಿಗೆ ಕೇಳಬೇಕು ಅಂತಾ ಅರವಿಂದ್ ಲಿಂಬಾವಳಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ.
 
ಶಾಸಕರಿಗೆ ಕೇಳುವಷ್ಟು ಶಾಂತಿ ಸಹನೆ ಇಲ್ಲ ಅಂದರೆ ಅವರು ಆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ ಅಂತ ಅನಿಸುತ್ತದೆ.ಇಡೀ ಸರ್ಕಾರಕ್ಕೇ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ.ಕೇವಲ ಲಿಂಬಾವಳಿಗೆ ಮಾತ್ರವಲ್ಲ, ಯಾರಿಗೂ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ.ಇದು ಸರ್ಕಾರದ ವೈಫಲ್ಯ.ಅಧಿಕಾರಿಗಳ ಕೈಗೊಂಬೆ ಆಗಿಟ್ಟುಕೊಂಡು ಬೇಕಾದ ಕೆಲಸಗಳನ್ನು ಮಾಡಿಕೊಳ್ತಿದ್ದಾರೆ.ಖಂಡಿತ ಬ್ರ್ಯಾಂಡೂ ಇಲ್ಲ ಏನೂ ಇಲ್ಲ.ಸಿದ್ದರಾಮಯ್ಯ ಕಾಲದವರೆಗೆ ಉಳಿಸಿದ್ವಿ  ಬೆಂಗಳೂರನ್ನ ಬ್ರ್ಯಾಂಡ್ ಆಗಿ ಆದ್ರೆ ಈಗ ಎಲ್ಲವೂ ಗೋವಿಂದ ಗೋವಿಂದ ಎಂದು ಡಿಕೆಶಿ ಅರವಿಂದ್ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ