ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್
ಸಿಎಂ ಬದಲಾವಣೆ ಸುದ್ದಿಗೆ ಮೂಲ ಬಿಜೆಪಿ. ಬಿಜೆಪಿ ನಾಯಕರು, ಮಾಜಿ ಶಾಸಕರೇ ಹೇಳ್ತಿದ್ದಾರೆ. ಬಿಜೆಪಿಯವರು ಹೇಳಿದ್ದನ್ನೇ ನಾವು ಪಿಕ್ ಮಾಡಿದ್ದೇವೆ. ಬಿಜೆಪಿಯವರೇ ನೀಡಿದ ಆಹಾರ, ಅವರೇ ನೀಡಿದ ಮಾಹಿತಿ. ಅದು ನಮ್ಮ ಪಾರ್ಟಿಯಲ್ಲಿ ಚರ್ಚೆ ಆಗುತ್ತಿದೆ. ನೀವೂ ಚರ್ಚೆ ಮಾಡ್ತಿದ್ದೀರಾ ಎಂದರು. ಇನ್ನು, ಪಾದಯಾತ್ರೆ ಕುರಿತು ಮಾತನಾಡಿ ಫ್ರೀಡಂ ಮಾರ್ಚ್ಗಾಗಿ ರಾಷ್ಟ್ರೀಯ ನಾಯಕರಿಗೆ ಆಹ್ವಾನ ಕೊಟ್ಟಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಯಾರು ಬರ್ತಾರೆ ಅನ್ನೋದರ ಬಗ್ಗೆ ಹೈಕಮಾಂಡ್ನಿಂದ ಮಾಹಿತಿ ಬರುತ್ತೆ. ಇದು AICC ನೀಡಿರುವ ಕಾರ್ಯಕ್ರಮ. ಇದನ್ನ ನೋಡಿ ಬಿಜೆಪಿಯವರು ಶುರು ಮಾಡಿದ್ದಾರೆ, ಮಾಡಲಿ. ದೇಶಕ್ಕೆ ಗೌರವ ಕೊಡೋದನ್ನ ತಪ್ಪು ಅಂತ ಹೇಳೋಕಾಗುತ್ತಾ? ಹೆಲ್ದಿ ಕಾಂಪಿಟೇಷನ್ ಇರಲಿ ಬಿಡಿ. ನಾವು ಅದನ್ನ ಟೀಕಿಸೋದಿಲ್ಲ ಮಾಡಲಿ. ಅವರು ಕೂಡ ರಾಷ್ಟ್ರ ಭಕ್ತರಾಗಬೇಕು ಅಂತ ಮಾಡ್ತಿದ್ದಾರೆ. ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.