ಮುಂಬೈನಿಂದ ಈ ಜಿಲ್ಲೆಗೆ ರೈಲು ಮೂಲಕ ಆಗಮಿಸಿದ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಮುಂಬೈ-ಗದಗ ರೈಲು ಮೂಲಕ ವಿಜಯಪುರ ಜಿಲ್ಲೆಗೆ ಒಟ್ಟು 210 ಜನ ವಲಸೆ ಕಾರ್ಮಿಕರು ಆಗಮಿಸಿದ್ದು, ಅವರನ್ನು ಜಿಲ್ಲಾಡಳಿತ ಆಯಾ ತಾಲೂಕಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಕಳುಹಿಸಲಾಯಿತು.
ವಿಜಯಪುರದ 95 ಜನರು, ಇಂಡಿ ತಾಲೂಕಿನ 40 ಜನರು, ಸಿಂದಗಿ ತಾಲೂಕಿನ 28 ಜನರು, ಮುದ್ದೇಬಿಹಾಳ ತಾಲೂಕಿನ 18 ಜನರು ಹಾಗೂ ಬಸವನಬಾಗೇವಾಡಿ ತಾಲೂಕಿನ 29 ಜನರನ್ನು ಆಯಾ ತಾಲೂಕಿನ ಬಸ್ ವ್ಯವಸ್ಥೆ ಕಲ್ಪಿಸುವುದರ ಮೂಲಕ ಕಳುಹಿಸಲಾಯಿತು.
ಇವರನ್ನು ಆಯಾ ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಹಾಗೂ ಹೆಲ್ಥ್ ಸ್ರೀನಿಂಗ್ ಮಾಡಲಾಗುವುದು,7 ದಿನ ಸಾಂಸ್ಥಿಕ ಕ್ವಾರಂಟೈನ್ ಸಂದರ್ಭದಲ್ಲಿ ಯಾರಿಗಾದರು ಲಕ್ಷಣಗಳು ಕಂಡುಬಂದರೆ ಅಂತವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುವುದು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳು ಕಂಡು ಬರದೇ ಇರುವವರು 7 ದಿನ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಂಡ ನಂತರ ಅವರನ್ನು ಹೋಮ್‍ಕ್ವಾರಂಟೈನ್ ಮಾಡಿ ನಿಗಾ ಇಡಲಾಗುವುದು ಎಂದರು.
ಜಿಲ್ಲೆಯ ರೈಲು ನಿಲ್ದಾಣಕ್ಕೆ ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆಯ ಜನರು ಆಗಮಿಸಿದ್ದು ಅವರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡಲು ಬಸ್ ವ್ಯವಸ್ಥೆ ಹಾಗೂ ಆಹಾರ ಕಿಟ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.