ಪಬ್, ಬಾರ್ ಮಾಲೀಕರ ವಿರುದ್ಧ ಅಶೋಕ್ ಗರಂ
ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರ ವಿರೋಧ ವಿಚಾರಕ್ಕೆ ಸಚಿವ ಆರ್.ಅಶೋಕ್ ಗರಂ ಆಗಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಆರ್.ಅಶೋಕ್, ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಆ ಮಾಸ್ಕ್‌ಗಳನ್ನು ಪಡೆದು ಪಬ್, ಬಾರ್‌ನವರು ಗ್ರಾಹಕರಿಗೆ ನೀಡಲಿ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು.. ಆ ರೀತಿ ಮಾಸ್ಕ್ ರಿಲೀಸ್ ಮಾಡಿದ್ದಾರೆ.. ಇವತ್ತು ಪತ್ರಿಕೆಯಲ್ಲಿ ನೋಡಿದೆ. ಜನರ ಪ್ರಾಣ ಉಳಿದರೆ ಎಲ್ಲಾ ಸಿಗುತ್ತೆ.. ನಾನು ಅವರಲ್ಲಿ ವಿನಂತಿ ಮಾಡ್ತೀನಿ.. ದಯಮಾಡಿ ಸಹಕಾರ ನೀಡಿ ಅಂತಾ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು