ಬಿಜೆಪಿಯವರು ಹೇಳಿದ್ರೆಂದು ಎಸ್‌ಎಲ್ ಭೈರಪ್ಪರ ಸ್ಮಾರಕ ಮಾಡ್ತಿಲ್ಲ

Sampriya

ಗುರುವಾರ, 25 ಸೆಪ್ಟಂಬರ್ 2025 (14:45 IST)
ಬೆಂಗಳೂರು:  ಎಸ್‌ ಎಲ್‌ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಮಾಡಿದರು. 

ಬಳಿಕ ಮಾತನಾಡಿದ ಅವರು ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದರು.

ಬಿಜೆಪಿಯವರು ಹೇಳಿದರೆಂದು ಎಸ್‌ ಎಲ್ ಭೈರಪ್ಪ ಅವರ ಸ್ಮಾರಕ ಮಾಡುತ್ತಿಲ್ಲ. ನಮ್ಮ ಸರ್ಕಾರ, ಭೈರಪ್ಪರವರ ಸ್ಮಾರಕವನ್ನು ಮೈಸೂರಲ್ಲೇ ಮಾಡಲು ನಿರ್ಧರಿಸಿದೆ.  ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದದ್ದರಿಂದ ಅಲ್ಲೇ ಸ್ಮಾರಕ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ಭೈರಪ್ಪ ಅವರು ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. 

ಭೋದನೆ ಮಾಡುತ್ತಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕೆಲಸ ಮಾಡುವುದು ಕಷ್ಟ. ಭೋದನೆ ಜತೆಗೆ ಅವರಿಗೆ ಸಾಹಿತ್ಯದ ಮೇಲೆ ಅಪಾರವಾದ ಆಸಕ್ತಿಯಿದೆ. ಅವರ ಅಗಲಿಕೆ ಇಂದು ಸಾರಸ್ವತ ಲೋಕ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

40 ಭಾಷೆಗಳು ಭಾಷಾಂತರವಾಗಿದ್ದು, ಇಷ್ಟೊಂದು ಬರಹಗಳು ಭಾಷಾಂತರವಾಗಿದ್ದು, ಅವರೊಬ್ಬರದ್ದೇ ಎಂದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ