ಲಡಾಖ್ ಜೆನ್ ಜಿ ಗಲಭೆಗೆ ಕಾಂಗ್ರೆಸ್ ನಾಯಕನದ್ದೇ ಪಿತೂರಿ: ಫೋಟೋ ಬಿಡುಗಡೆ ಮಾಡಿದ ಅಮಿತ್ ಮಾಳ್ವಿಯಾ

Krishnaveni K

ಗುರುವಾರ, 25 ಸೆಪ್ಟಂಬರ್ 2025 (14:06 IST)
ಲಡಾಖ್: ಇಲ್ಲಿ ನಡೆದ ಸಾಮೂಹಿಕ ಗಲಭೆ, ಹಿಂಸಾಚಾರಕ್ಕೆ ಕಾಂಗ್ರೆಸ್ ಸ್ಥಳೀಯ ಕೌನ್ಸಿಲರ್ ಪುಂಟ್ಸಾಗ್ ಸ್ಟ್ಯಾನಿಶ್ ತ್ಸೆಪಾಗ್ ಅವರ ಪಿತೂರಿಯೇ ಕಾರಣ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಮೊನ್ನೆಯಷ್ಟೇ ಮತಗಳ್ಳತನದ ವಿರುದ್ಧ ಜೆನ್ ಜಿ ಹೋರಾಟ ನಡೆಸಬೇಕು ಎಂದು ಪರೋಕ್ಷವಾಗಿ ಕರೆ ನೀಡಿದ್ದರು. ಇದೀಗ ಲಡಾಖ್ ನಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಿನ್ನೆ ಭಾರೀ ಗಲಭೆ, ಹಿಂಸಾಚಾರ ನಡೆದಿದೆ. ಈ ಗಲಭೆಯ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಫೋಟೋ, ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಕಚೇರಿಗಳು, ಕೇಂದ್ರಗಳನ್ನೇ ಗುರಿಯಾಗಿರಿಸಿಕೊಂಡು ಕೌನ್ಸಿಲರ್ ಪುಂಟ್ಸಾಗ್ ಗಲಭೆಗೆ ಪ್ರಚೋದಿಸುತ್ತಿದ್ದಾನೆ ಎಂದು ಆರೋಪಿಸಿದೆ.

ಅಲ್ಲದೆ ಮತ್ತೊಬ್ಬ ಕಾಂಗ್ರೆಸ್ ಮಾಜಿ ಶಾಸಕ ಡೆಲ್ಡಾನ್ ನಾಂಗ್ಯಾಲ್ ಕೂಡಾ ಗಲಭೆ ಎಬ್ಬಿಸಲು ಪ್ರಚೋದಿಸಿದ್ದಾನೆ. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ನಲ್ಲಿ ಶಾಂತಿ ಕದಡಲು ಈ ಕಾಂಗ್ರೆಸ್ ನಾಯಕರೇ ಸಂಚು ರೂಪಿಸಿದ್ದಾರೆ. ಇದೆಲ್ಲವೂ ರಾಹುಲ್ ಗಾಂಧಿ ದುಷ್ಟ ಯೋಜನೆಗಳೇ ಎಂದು ಅಮಿತ್ ಮಾಳ್ವಿಯಾ ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ