ಕಂದಾಯ ಇಲಾಖೆ ಗೈಡ್ ಲೈನ್ಸ್ ವ್ಯಾಲ್ಯೂ ಹೆಚ್ಚಳ ಮಾಡಿರೋದು ಸರಿಯಲ್ಲ.ಇದು ಬೆಲೆ ಏರಿಕೆ ಬಿಸಿಯಲ್ಲಿರೋ ನಾಡಿನ ಜನರಿಗೆ ಭೂ ಸಂಬಂಧಿ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಲು, ಮನೆ ಕಟ್ಟಡ ಖರೀದಿ ಮಾಡಲು ಕಷ್ಟವಾಗುತ್ತದೆ. ಕೊರೋನಾ ಕಾಲದಲ್ಲಿ ನಾವೇ ಇವುಗಳ ಗೈಡ್ ಲೈನ್ ವ್ಯಾಲ್ಯೂ ಕಡಿಮೆ ಮಾಡಿದ್ದೆವು. ಈಗ ಸರ್ಕಾರ. ಇದನ್ನು ಹೆಚ್ಚು ಮಾಡಿ ಜನರನ್ನ ಸಂಕಷ್ಟ ಕ್ಕೆ ದೂಡಿದೆ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಕಂದಾಯ ಆರ್ ಅಶೋಕ್ ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ನಾವು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಟೆಕ್ನಿಕಲ್ ನಮ್ಮವರು ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಕೇಳೋಕೂ ಮೊದಲೇ ನೀರು ಬಿಟ್ಟಿದ್ದಾರೆ.ಈಗಲೂ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಇದು ಆಡಳಿತ ವೈಫಲ್ಯಮಕಾಂಗ್ರೆಸ್ ಕಾವೇರಿ ವಿಚಾರದಲ್ಲೂ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳಲು ಮುಂದಾಗಿದೆಮ ಅದಕ್ಕೆ ರಾಜಕೀಯ ಬೇಕೇ ಹೊರತು ರಾಜ್ಯದ ಹಿತವಲ್ಲ ಎಂದು ಕಾವೇರಿ ವಿಚಾರಕ್ಕೆ ಅಶೋಕ್ ಕಿಡಿಕಾರಿದ್ದಾರೆ.