ನೀರು ಬಿಟ್ಟಿಲ್ಲವೆಂದು ಸರ್ಕಾರದ ಕಳ್ಳಾಟ

ಬುಧವಾರ, 20 ಸೆಪ್ಟಂಬರ್ 2023 (17:40 IST)
ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗ್ತಿದ್ರೂ ನೀರು ರಿಲೀಸ್​ ಮಾಡಿಲ್ಲವೆಂದು ರಾಜ್ಯ ಸರ್ಕಾರ ಸುಳ್ಳು ಹೇಳಿಕೊಂಡು ಬರ್ತಿದೆ. ನಾವು ನೀರು ಬಿಡದೇ ಇದ್ರೂ ಹೋಗೋ ನೀರು ಹೋಗುತ್ತಲೇ ಇದೆ. ನಾವ್ಯಾಕೆ ಆ ಬಗ್ಗೆ ಚರ್ಚೆ ಮಾಡೋದು. ಸೋರಿಕೆ ವಾಟರ್ ಬಿಟ್ರೆ, ಬೇರೆ ನೀರು ಹೋಗುತ್ತಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ್ದ ಅವರು, 3 ಸಾವಿರ ಕ್ಯೂಸೆಕ್ ಸೀಪೇಜ್ ಅಂದರೆ ಸೋರಿಕೆ ನೀರು ಹೋಗುತ್ತಿದೆ ಎಂದು ತಿಳಿಸಿದ್ದಾರೆ. ರೈತರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಈ ರೀತಿ ಸುಳ್ಳು ಆರೋಪ ಮಾಡ್ತಿದ್ದಾರೆಂದು ರೈತರು ಕಿಡಿಕಾರಿದ್ದಾರೆ. ತಮಿಳುನಾಡಿನವರಿಗೆ ನಾವು ಬಗ್ಗಿಲ್ಲ. ನಾವು ನಮ್ಮ ರೈತರನ್ನು ರಕ್ಷಣೆ ಮಾಡುತ್ತೇವೆ. ನಾವು ನೀರು ಬಿಟ್ಟಿಲ್ಲ.. ಬೇಕಿದ್ರೆ ಹೋಗಿ ನೋಡಿಕೊಂಡು ಬನ್ನಿ ಎಂದು ಸಚಿವರು ಹೇಳಿದ್ದಾರೆ.. ವಾರ್ತಾ ಇಲಾಖೆ ನೀಡುವ ಅಧಿಕೃತ ಮಾಹಿತಿಯಲ್ಲಿ ನೀರು ಬಿಟ್ಟಿರುವುದು ಬಹಿರಂಗವಾಗಿದೆ.. ಇತ್ತ KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಟ್ಟಿರೋದಕ್ಕೆ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಬೀದಿಗಿಳಿದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ