ಶಾಲಾ ಬಾಲಕಿಯರ ನಡುವಿನ ಕ್ಯಾಟ್ ಫೈಟ್ ಈ ವೈರಲ್ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಮೂವರು ವಿದ್ಯಾರ್ಥಿನಿಯರು ಹಿಂಸಾತ್ಮಕವಾಗಿ ಪರಸ್ಪರ ಹಿಡಿದು ಎಳೆದಾಡುತ್ತ , ಪರಸ್ಪರ ಪಂಚ ನೀಡುತ್ತಿರುವುದನ್ನು ನೀವು ಗಮನಿಸಬಹುದು. ಅಷ್ಟೇ ಅಲ್ಲ ಅವರು ಪರಸ್ಪರ ವಾಗ್ದಾಳಿ ಕೂಡ ನಡೆಸುತ್ತಿದ್ದಾರೆ. ಇನ್ನೊಂದೆಡೆ ಜಗಳವಾಡುವುದನ್ನು ನಿಲ್ಲಿಸಲು ಪಕ್ಕದಲ್ಲಿ ನಿಂತರುವ ಹುಡುಗಿಯರು ವಿನಂತಿಸುತ್ತಿರುವುದನ್ನು ನೀವು ಕೇಳಬಹುದು. ಮತ್ತೊಂದೆಡೆ ಕೆಲವರು ಜಗಳ ಬಿಡಿಸಲು ಕೂಡ ಮುಂದಾಗಿದ್ದಾರೆ. ಆದರೂ ಕೂಡ ಯಾವುದೇ ಪರಿಣಾಮ ಉಂಟಾಗಿಲ್ಲ.