ಸೈಟ್ ಕೊಡಿಸೋದಾಗಿ ಲಕ್ಷ ಲಕ್ಷ ಕೊಳ್ಳೆ ಹೊಡೆದ ಆಸಾಮಿ

ಭಾನುವಾರ, 22 ಡಿಸೆಂಬರ್ 2019 (17:28 IST)
ಸೈಟ್ ಕೊಡಿಸುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ಹಣ ಪಡೆದುಕೊಂಡು ಭೂಪನೊಬ್ಬ ಮೋಸ ಮಾಡಿದ್ದಾನೆ.

ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಎಪಿಎಂಸಿ - ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನವನಗರದ ನಿಸರ್ಗ ಡೆವಲಪರ್ಸ್ ಮಾಲೀಕ ನಾಗರಾಜ ಶಾವಿ ಬಂಧಿತನಾಗಿದ್ದಾನೆ. ಇವನು ಲೇಔಟ್ ಮಾಡಿ ಸೈಟ್ ಮಾರುತ್ತೇನೆಂದು ಹಲವು ಜನರಿಂದ 1 ರಿಂದ 2 ಲಕ್ಷ ರೂ. ತೆಗೆದುಕೊಂಡು ಸೈಟ್ ಕೊಡದೇ ಹಣವನ್ನು ವಾಪಾಸ್ ಕೊಡದೇ ಹಲವಾರು ವರ್ಷಗಳಿಂದ ಸುಳ್ಳು ಹೇಳಿ ಅಲೆದಾಡಿಸುತ್ತಿದ್ದನು.

ಈ ಹಿನ್ನಲೆಯಲ್ಲಿ ಸೈಟ್ ಕೊಡದೇ ಇರದ ಕಾರಣ ಜನರೆಲ್ಲಾ ಕಚೇರಿಗೆ ತೆರಳಿ ಸೈಟ್ ಕೊಡುವಂತೆ ದುಂಬಾಲು ಬಿದ್ದಾಗ ಚೆಕ್ ಗಳನ್ನು ಕೊಟ್ಟು ಕೈತೊಳೆದುಕೊಂಡಿದ್ದ.

ಆದರೆ ಆ ಚೆಕ್ ಗಳು ಬೌನ್ಸ್ ಆದ ಕಾರಣ ಮತ್ತೆ ಕೇಳಿದಾಗ ಹಣ ಕೊಡುತ್ತೇನೆ ಎಂದು ಹೇಳಿ ಕೆಲವು ದಿನಗಳ ಹಿಂದೆ ಕಚೇರಿಗೆ ಬೀಗ ಹಾಕಿ ತಲೆಮರೆಸಿಕೊಂಡು ಹೋಗಿದ್ದನು. ಈ ಹಿನ್ನಲೆಯಲ್ಲಿ ವಂಚನೆಗೊಳಗಾದವರು ಪೊಲೀಸರಿಗೆ ದೂರು ಕೊಟ್ಟಿದ್ದರು. ವಂಚಕ ನಾಗರಾಜನನ್ನು ಕಾರು ಸಮೇತ ಪೊಲೀಸರು ಬಂಧಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ