ಹಾಲಿ ಶಾಸಕ ರಾಜು ಕಾಗೆ ವಿರುದ್ಧ ತೊಡೆತಟ್ಟಿದ ಪಾಟೀಲ ಬ್ರದರ್ಸ್

ಶನಿವಾರ, 28 ಏಪ್ರಿಲ್ 2018 (13:09 IST)
ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ಕಾಗವಾಡ ಮತಕ್ಷೇತ್ರದ ಶ್ರೀಮಂತ ಪಾಟೀಲ್ ಈ ಬಾರಿ ಕಾಂಗ್ರೇಸ್ನಿಂದ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 
ಹಾಲಿ ಶಾಸಕ ರಾಜು ಕಾಗೆ ವಿರುದ್ದ ಸ್ಫರ್ಧೆ ಮಾಡಿ ಪರಾಭವಗೊಂಡಿದ್ದ ಅವರು ಇವತ್ತು ತಮ್ಮ ಸಹೋದರ ಉತ್ತಮ ಪಾಟೀಲರನ್ನು ಕಾಂಗ್ರೇಸ್ಗೆ ಸೇರ್ಪಡೆ ಮಾಡಿಕೊಂಡರು. ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಉತ್ತಮ ಪಾಟೀಲ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೇಸ್ಗೆ ಸೇರ್ಪಡೆಯಾದರು. 
 
ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು, ಆದರೆ ಕೊನೆ ಕ್ಷಣದಲ್ಲಿ ತಮ್ನ ನಿರ್ಧಾರ ಬದಲಿಸಿದ ಉತ್ತಮ ಪಾಟೀಲ್ ಜೆ ಡಿ ಎಸ್ ಪಕ್ಷ ತೊರೆದು ಅಣ್ಣನಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಸರಿಯಾದ ಸ್ಪಂದನೆ ಸಿಕ್ಕಿಲ್ಲ ಹೀಗಾಗಿ ನಾನು ಪಕ್ಷೇತರನಾಗಿ ಕಣಕ್ಕೆ ಇಳಿಯುವ ನಿರ್ಧಾರ ಮಾಡಿದ್ದೆ. ಅಣ್ಣನೇ ನನ್ನ ಪ್ರತಿಸ್ಫರ್ಧಿ ಆಗಿರುವುದರಿಂದ ನಾನು ನನ್ನ ನಾಮಪತ್ರ ಹಿಂಪಡೆಯಲು ನಿರ್ಧಾರ ಮಾಡಿದ್ದೆನೆ. ಅಲ್ಲದೆ ಈ ಬಾರಿ ಶ್ರೀಮಂತ ಪಾಟೀಲ್ ಅವರ ಗೆಲುವಿಗೆ ಶ್ರಮಿಸಿವಿದಾಗಿ ಹೇಳಿದರು. 
 
ಇನ್ನು ಕಾಂಗ್ರೇಸ್ ಪಕ್ಷದ ಅಧಕೃತ ಅಭ್ಯರ್ಥಿ ಶ್ರೀಮಂತ ಪಾಟೀಲ್ ಮಾತನಾಡಿ, ಸಹೋದರ ಶಕ್ತಿ ಗೆಲುವಿಗೆ ಕಾರಣವಾಗಲಿದೆ ಎಂದರು. ಇನ್ನು ಈ ಬಾರಿ ಸಹೋದರ ಉತ್ತಮ ಪಾಟೀಲ್ ಕಾಂಗ್ರೇಸ್ಗೆ ಸೇರ್ಪಡೆ ಆಗಿರುವುದರಿಂದ ತಮಗೆ ದಾರಿ ಇನ್ನಷ್ಟು ಸುಲಭವಾಗಿದೆ ಎಂದರು. ಸಧ್ಯ ಸಹೋದರರಿಬ್ಬರು ಸೇರಿ ಹಾಲಿ ಶಾಸಕ ರಾಜು ಕಾಗೆ ವಿರುದ್ಧ ತಡೆ ತಟ್ಟಿದ್ದು ಇವರ ಜಂಟಿ ಕಾರ್ಯಾಚರಣೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೊದನ್ನ ಕಾದು ನೋಡಬೇಕು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ