ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ರೇವಣ್ಣ ಪರವಾಗಿ ಜಮೀರ್ ಅಹಮದ್ ಇಂದು ಚುನಾವಣಾ ಪ್ರಚಾರ ನಡೆಸಿದ್ರು.
ಮುಸ್ಲಿಂ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜಮೀರ್ ಅಬ್ಬರದ ಪ್ರಚಾರ ನಡೆಸಿದ್ರು. ನಗರದ ಪ್ರಮುಖ ಮುಸ್ಲಿಂ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ಜಮೀರ್ಗೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ.ರೇವಣ್ಣ ಸಾಥ್ ನೀಡಿದ್ರು.
ಇದೇ ವೇಳೆ ಜೆಡಿಎಸ್ ತೊರೆದು ಐದು ಜನ ಹಾಲಿ ನಗರಸಭಾ ಸದಸ್ಯರು ಜಮೀರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ್ರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಹೆಚ್ಡಿಕೆ ವಿರುದ್ಧ ಕಿಡಿಕಾರಿದ್ರು.
ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಯಾಕೆ ಸ್ಪರ್ಧೆ ಮಾಡಬೇಕಾಗಿತ್ತು, ಜನರಲ್ಲಿ ಭಯವಿದೆ, ಅವರನ್ನು ಯಾಕೆ ಗೆಲ್ಲಿಸಬೇಕು, ಅವರು ಗೆದ್ದರೂ ರಾಜೀನಾಮೆ ನೀಡ್ತಾರೆ, ಅವರನ್ನ ನೋಡಿ ನಮಗೆ ಸಾಕಾಗಿದೆ, ಚನ್ನಪಟ್ಟಣ ಜನತೆ ಬೈ ಎಲೆಕ್ಷನ್ ಗಳನ್ನ ನೋಡಿ ನೋಡಿ ಸಾಕಾಗಿದೆ ಎಂದು ಟಾಂಗ್ ಕೊಟ್ರು.
ಯೋಗೇಶ್ವರ್ ನನಗೆ ಯಾವತ್ತೂ ಸ್ನೇಹಿತರು ಅಲ್ಲ ನಾನು ಅವರಿಗೆ ಯಾವತ್ತಿದ್ದರೂ ವಿರೋಧಿ ಎಂದು ಸಿಪಿವೈ ವಿರುದ್ಧ ಗುಡುಗಿದ್ರು. ನಾನು ಚನ್ನಪಟ್ಟಣ ಕ್ಷೇತ್ರದ ಮುಸ್ಲಿಮರ ಮನೆ ಮಗ ಇದ್ದ ಹಾಗೆ ಎಂದರು.