ಜನವರಿ 1 ರಿಂದ ಎಟಿಎಂ ವಹಿವಾಟು ದುಬಾರಿಯಾಗಲಿವೆ: ಭಾರತೀಯ ರಿಸರ್ವ್ ಬ್ಯಾಂಕ್

ಶುಕ್ರವಾರ, 10 ಡಿಸೆಂಬರ್ 2021 (20:18 IST)
ಎಟಿಎಂ ವಹಿವಾಟುಗಳು ಜನವರಿ 1, 2022 ರಿಂದ ದುಬಾರಿಯಾಗಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ.. ನಗದು ಹಿಂಪಡೆಯಲು ಗ್ರಾಹಕರು 21 ರೂ ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ.
ಎಟಿಎಂನಿಂದ ನಗದು ಹಿಂಪಡೆಯುವ ಮಿತಿ ಮುಗಿದ ನಂತರ ಎಟಿಎಂನಿಂದ ನಗದು ಹಿಂಪಡೆಯುವಿಕೆ ದುಬಾರಿಯಾಗಲಿದ್ದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗ್ರಾಹಕರು ಇಂತಿಷ್ಟು ಮಿತಿ ಮೀರಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.HDFC ಬ್ಯಾಂಕ್ ವೆಬ್‌ಸೈಟ್ ಪ್ರಕಾರ, 1ನೇ ಜನವರಿ 2022 ರಿಂದ ಜಾರಿಗೆ ಬರುವಂತೆ, ಎಟಿಎಂ ವಹಿವಾಟು ಶುಲ್ಕದ ಉಚಿತ ಮಿತಿ 20 ರೂ. ಹಾಗೂ ತೆರಿಗೆಗಳನ್ನು ಪರಿಷ್ಕರಿಸಿ 21 ರೂ. ಹಾಗೂ ತೆರಿಗೆಗಳಿಗೆ ಹೆಚ್ಚಿಸಲಾಗುವುದು.
ಉಚಿತ ಮಾಸಿಕ ಮಿತಿಗಳ ಹೊರತಾಗಿ ಎಟಿಎಂ ವಹಿವಾಟುಗಳು ದುಬಾರಿಯಾಗುತ್ತವೆ, ಅಂದ ಹಾಗೆ, ಆರ್‌ಬಿಐ ಬ್ಯಾಂಕುಗಳಿಗೆ ನಗದು ಮತ್ತು ನಗದುರಹಿತ ಸ್ವಯಂಚಾಲಿತ ಎಟಿಎಂ ಶುಲ್ಕ ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ.
ಬದಲಾವಣೆಯನ್ನು ಜಾರಿಗೊಳಿಸಿದ ನಂತರ ಮಿತಿ ಮೀರಿದಾಗ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್‌ ಗಳ ಎಟಿಎಂಗಳಲ್ಲಿ ಪ್ರತಿ ವಹಿವಾಟಿಗೆ 21 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ