ಕೈಗಾರಿಕಾ ನಿವೇಶನಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ: ಕಾನೂನು ತಿದ್ದುಪಡಿಗೆ ಸಂಪುಟ ಸಮ್ಮತಿ

ಶುಕ್ರವಾರ, 10 ಡಿಸೆಂಬರ್ 2021 (19:26 IST)
ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿ, ಕೆಎಸ್‌ಎಸ್‌ಐಡಿಸಿ ಸೇರಿದಂತೆ ಸರ್ಕಾರಿ ಸಂಸ್ಥೆ ಹಂಚಿಕೆ ಮಾಡುವ ಕೈಗಾರಿಕಾ ನಿವೇಶನಗಳಿಗೆ ಇನ್ನು ಮುಂದೆ ಪ್ರತ್ಯೇಕ ಆಸ್ತಿ ತೆರಿಗೆ ವಿಧಿಸಲಾಗುತ್ತದೆ.
ಈ ಸಂಬಂಧ ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಇದರ ಕಲಂ 94 ಹಾಗೂ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಇದರ ಕಲಂ 108ಕ್ಕೆ ಆಸ್ತಿ ತೆರಿಗೆ ಸಂಗ್ರಹಿಸಲು ಅಧಿಕಾರ ನೀಡುವ ತಿದ್ದುಪಡಿಯನ್ನು ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
 
ಖಾಲಿ ಭೂಮಿಗಳಿಗೆ ಮೂಲ ಬೆಲೆಯ ಶೇ. 0.02ಗೆ ಕಡಿಮೆ ಇಲ್ಲದಂತೆ ಹಾಗೂ 0.05ಕ್ಕೆ ಹೆಚ್ಚಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಇದರ ಕಲಂ 94(1 ಎ) (ಜೆ)ರಡಿ ಬಳಸದ ಹಾಗೂ ಬಳಸಲು ಉದ್ದೇಶ ಹೊಂದಿಲ್ಲದ ಖಾಲಿ ಭೂಮಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ