ರಾತ್ರೋರಾತ್ರಿ ಎಟಿಎಮ್ ಕಳ್ಳತನಕ್ಕೆ ಯತ್ನ

ಶನಿವಾರ, 1 ಸೆಪ್ಟಂಬರ್ 2018 (19:14 IST)
ರಾತ್ರೋರಾತ್ರಿ ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
 ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ರಾತ್ರೋರಾತ್ರಿ ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ವಿದ್ಯಾಗಿರಿಯ ಐದನೇ ಕ್ರಾಸ್ ನಲ್ಲಿರುವ ಎಸ್ ಬಿ ಐ ಎಟಿಎಮ್ ನ್ನು ಗ್ಯಾಸ್ ಕಟರ್ ನಿಂದ ಕೊರೆದು ಕಳ್ಳತನಕ್ಕೆ ಯತ್ನ ನಡೆದಿದೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಕಳ್ಳತನಕ್ಕೆ ಯತ್ನ ಮಾತ್ರ  ನಡೆದಿರೋದಾಗಿ ಕಂಡು ಬರುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ಬಳಿಕ ಹಣ ಕಳ್ಳತನ ವಾಗಿದೆಯಾ? ಎಂಬುದರ ಬಗ್ಗೆ ವಿಷಯ ತಿಳಿಯಲಿದೆ. ಪೊಲೀಸರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ