ಅತ್ಯಾಚಾರ ಮಾಡುವ ಯತ್ನದಲ್ಲಿ ಈ ದುರುಳ ಯುವತಿಗೆ ಮಾಡಿದ್ದೇನು ಗೊತ್ತಾ?!
ರೋಹ್ಟಗಿಯ ಸುಖ್ಬೀರ್ ಸಿಂಗ್ ಎಂದು ಆರೋಪಿಯನ್ನು ಗುರುತಿಸಲಾಗಿದೆ. ಈತ 14 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ, ಆಕೆಯ ಕೆನ್ನೆಗೆ ಬಲವಾಗಿ ಕಚ್ಚಿ ಹಿಂಸೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯ ತಾಯಿ ಮನೆಯಲ್ಲಿಲ್ಲದ ವೇಳೆ ಈತ ಮನೆಯೊಳಗೆ ನುಗ್ಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಘಟನೆ ಕುರಿತಂತೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.