ಚಿಕ್ಕಮ್ಮ ಅಮ್ಮನಾಗಿಲ್ಲ, ಅಪ್ಪ ಮನೆಗೆ ಸೇರಿಸಿಲ್ಲ: ತಂದೆ ವಿರುದ್ಧ ನಿಶಾ ಯೋಗೇಶ್ವರ್‌ ಗಂಭೀರ ಆರೋಪ

sampriya

ಬುಧವಾರ, 22 ಮೇ 2024 (17:41 IST)
Photo By X
ರಾಮನಗರ: ಬಿಜೆಪಿ ನಾಯಕ, ಮಾಜಿ ಸಚಿವ ಸಿಪಿ ಯೋಗೇಶ್ವರ್‌ ವಿರುದ್ಧ ಅವರ ಮೊದಲನೆ ಹೆಂಡತಿ ಮಗಳು ನಿಶಾ ಯೋಗೇಶ್ವರ್‌ ಸಾಲು ಸಾಲು ಆರೋಪಗಳನ್ನು ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ತಂದೆ ಹಾಗೂ ಚಿಕ್ಕಮ್ಮನ ವಿರುದ್ಧ ಆರೋಪ ಮಾಡಿದ ಅವರು ಮನೆಗೆ ಹೋದ್ರೆ ನನಗೆ ಮಗಳ ಸ್ಥಾನವಿಲ್ಲ, ನನ್ನ ಚಿಕ್ಕಮ್ಮ ಯಾವತ್ತೂ ನನಗೆ ಅಮ್ಮನ ಪ್ರೀತಿ ತೋರಿಸಿಲ್ಲ. ಜನರ ಇಚ್ಛೆಯಂತೆ ರಾಜಿ ಮಾಡಿಕೊಂಡು ಅಪ್ಪನ ಜತೆ ಬದುಕಲು ಮನೆಗೆ ಹೋದರೆ, ಮನೆಯಿಂದ ಹೊರಹಾಕುತ್ತಾರೆ. ಬಿಕ್ಷೆಯಾದರೂ ಬೇಡು, ಮನೆಗೆ ಬರ್ಬೇಡ ಎಂದು ಅಪ್ಪ ತಾಕಿತ್ತು ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ. ರಾಮಾಯಣದ ಸೀತೆ 14 ವರ್ಷಗಳ ಕಾಲ ವನವಾಸ ಅನುಭವಿಸಿದರೆ ತಾನು 24 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದೇನೆ, ತಂದೆಯ ಎರಡನೇ ಹೆಂಡತಿಯ ಮಗ ಯಾವತ್ತೂ ತನ್ನ ಪಾಲಿಗೆ ಭರತನಾಗಲಿಲ್ಲ ಎನ್ನುತ್ತಾರೆ.

ರಾಜ್ಯದಲ್ಲಿ ಈಗಾಗಲೇ ಸಾಲು ಸಾಲು ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸುತ್ತಿದ್ದು, ಈ ವಿಡಿಯೋದಲ್ಲಿ ನಿಶಾ ಮಾಡುತ್ತಿರುವ ಅರೋಪಗಳು ನಿಜವೇ ಆಗಿದ್ದರೆ, ಯೋಗೇಶ್ವರ್ ರಾಜಕೀಯ ಬದುಕಿಗೆ ದೊಡ್ಡ ಅಪಾಯ ಎದುರಾಗೋದು ನಿಶ್ಚಿತ ಅಂತ ಅನಿಸದಿರದು. ನಿಶಾ ದುಃಖ, ಹತಾಷೆ ಮತ್ತು ಯಾತನೆಯಿಂದ ತಮ್ಮ ಮಾತುಗಳನ್ನು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ