ಮೈಸೂರು ಅರಮನೆ ಕಂಡು ಬೆರಗಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಮತ್ತು ಡೀನ್ ಜಾನ್ಸ್ ಭೇಟಿ ನೀಡಿದ್ದಾರೆ. ಕೆಪಿಎಲ್ ಗೆ ಬ್ರೆಟ್ ಲೀ ಮತ್ತು ಡೀನ್ ಜಾನ್ಸ್ ಆಗಮಿಸಿದ್ದು, ಮೈಸೂರು ಅರಮನೆಯ ಸೊಬಗು ಕಂಡು ಬೆರಗಾದರು.
ಅರಮನೆಯ ಸಫಾರಿ ಆನೆ ರೂಬಿಯ ಆಶೀರ್ವಾದ ಪಡೆದು, ಆನೆಯೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಆನೆಗಳಿಂದ ಆಶೀರ್ವಾದ ಪಡೆದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಒಂದು ಒಳ್ಳೆಯ ಅನುಭವ. ಮೈಸೂರು ಅರಮನೆ ಸುಂದರ ಅರಮನೆ ಎಂದು ಬ್ರೆಟ್ ಲೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.