ಬೈಕ್ ಗೆ ಆಟೋ ಡಿಕ್ಕಿ..ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಭಾನುವಾರ, 26 ಫೆಬ್ರವರಿ 2023 (19:10 IST)
ಅದು ಸಂಜೆ 6.12. ರ ಸಮಯ.ಪ್ರತಿಷ್ಠಿತ ಇಂದಿರಾನಗರದ ಮೊದಲನೇ ಹಂತ.ಒಳ್ಳೆ ವ್ಯಾಪಾರದ ಸಮಯ.ಅಂಗಡಿ ಮಾಲೀಕರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರು.ಇದ್ದಕ್ಕಿದ್ದಂತೆ ಬಂದ ಅಪಘಾತದ ಸದ್ದು ಎಲ್ರನ್ನ ಬೆಚ್ಚಿ ಬೀಳಿಸಿತ್ತು.ನೋಡ ನೋಡ್ತಿದ್ದಂತೆ ಆಟೋ ಫುಟ್ ಪಾತ್ ಮೇಲೆ ಹತ್ತಿತ್ತು.ಚಾಲಕ ಕೆಳಗೆ ಬಿದ್ದು ಒದ್ದಾಡತೊಡಗಿದ್ದ.ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸಿಸಿಟಿವಿ ದೃಶ್ಯ ನೋಡಿ.ಆಟೋ ಅದೆಷ್ಟು ವೇಗವಾಗಿ ಬರ್ತಿದೆ‌ ಅನ್ನೋದು.ಹೀಗೆ ಬಂದು ಹಾಗೆ ಹೋಗಿದ್ದಿದ್ರೆ ಏನು ಸಮಸ್ಯೆ ಇರ್ತಾ ಇರ್ಲಿಲ್ಲ.ಆದ್ರೆ ಹೀಗೆ ಬಂದ ಆಟೋ ಚಾಲಕ ಅಡ್ಡರಸ್ತೆ ಯಿಂದ ಬರ್ತಾ ಇದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭಯನಾಕ ಘಟನೆ ನಡೆದಿರೋದು ಇಂದಿರಾನಗರ ಮೊದಲನೇ ಹಂತದ 2 ನೇ ಕ್ರಾಸ್ ನಲ್ಲಿ.ನಿನ್ನೆ ಸಂಜೆ 6.12 ರ ಸಮಯ.ಮುಖ್ಯರಸ್ತೆ ಮಾರ್ಗವಾಗಿ ಆಟೋವೊಂದು ಅತೀ ವೇಗವಾಗಿ ಬರ್ತಾ ಇತ್ತು.ಈ ವೇಳೆ ಅಡ್ಡರಸ್ತೆಯಿಂದ ಬೈಕ್ ವೊಂದು ಬಂದಿದೆ.ಚಾಲಕನ ನಿಯಂತ್ರಣಕ್ಕೆ ಸಿಗದ ಆಟೋ ಬೈಕ್ ಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ಗಾಯಾಗೊಂಡರೆ..ಆಟೋ ಚಾಲಕ ಕೂಡ ಆಟೋದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ.ಚಾಲಕ ಕೆಳಗೆ ಬಿದ್ದಂತೆ ಮುಂದೆ ಹೋದ ಆಟೋ ರಸ್ತೆಯಲ್ಲಿ ನಿಂತಿದ್ದ ಒಂದು ಬೈಕ್ ಮತ್ತು ಕಾರಿಗೆ ಡಿಕ್ಕಿಯಾಗಿ ಫುಟ್ ಪಾತ್ ಮೇಲೆ ಹತ್ತಿದೆ.ಅದೃಷ್ಟವಶಾತ್ ಬೈಕ್ ಸವಾರ ಮತ್ತು ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಘಟನೆ ಸಂಬಂಧ ಸ್ಥಳೀಯರು ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಬೇರೆ ಬೇರೆ ಕಡೆಗೆ ಹೋಗೊ ಜನರು ಈ ರಸ್ತೆಗಳಲ್ಲಿ ಬೈಕ್‌ಪಾರ್ಕ್ ಮಾಡಿ ಹೋಗ್ತಾರೆ.ಅಲ್ಲದೇ ಸ್ಪೀಡ್ ಹಂಪ್ ಕೂಡ ಇಲ್ಲದಿದ್ದರಿಂದ ಮೂರು ಕಡೆಯಿಂದ ವಾಹನ ಅತಿ ವೇಗವಾಗಿ ಬರುತ್ತೆ.ಇದೇ ಕಾರಣಕ್ಕೆ ಅಪಘಾತವಾಗ್ತಿದೆ.ಏನಿಲ್ಲ ಅಂದ್ರೂ ತಿಂಗಳಿಗೆ ಒಂದು ಅಪಘಾತವಾಗ್ತಿದೆ.ಆದಷ್ಟು ಬೇಗ ಸ್ಪೀಡ್ ಹಂಪ್ ಹಾಕಿದ್ರೆ ಅಪಘಾತ ಕಡಿಮೆ ಆಗುತ್ತೆ ಅಂತಾ ಮನವಿ ಮಾಡಿಕೊಂಡ್ರು.

ಸದ್ಯ ಚಾಲಕರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ಅಲ್ಲದೇ ಬೈಕ್ ಸವಾರ ಮದ್ಯಪಾನ ಮಾಡಿದ್ದ ಅನ್ನೋದು ಕೂಡ ಗೊತ್ತಾಗಿದೆ.ಇದು ಒಂದು ಕಡೆ ಆದರೆ ಸ್ಪೀಡ್ ಹಂಪ್ ಹಾಕುವುದರ ಮೂಲಕ ಮತ್ತಷ್ಟು ಅನಾಹುತ ತಡೆಯುವ ಕೆಲಸ ಬಿಬಿಎಂಪಿ ಮಾಡಬೇಕಿದೆ.ಘಟನೆ ಸಂಬಂಧ ಜೀವನ್ ಭೀಮಾನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ