ಅಬ್ದುಲ್ ರಹೀಮ್ (32) ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಜಾವೇದ್ ಎಂಬಾತ ರಹೀಮ್ ಬಳಿ ಬಾಡಿಗೆಗೆ ಬರುವಂತೆ ಕೇಳಿದ್ದ.ಜಾವೇದ್ ಪಿಕ್ ಪಾಕೆಟ್ ಮಾಡುತ್ತಿದ್ದಾನೆ ಎಂಬ ಆರೋಪವನ್ನು ಹೊತ್ತಿರುವುದರಿಂದ ಆತನೊಂದಿಗೆ ಬಾಡಿಗೆಗೆ ಹೊೋಗಲು ನಿರಾಕರಿಸಿದ್ದ. ಈ ಕ್ಷುಲ್ಲಕ ಕಾರಣಕ್ಕೆ ರಹೀಮ್ ಮೇಲೆ ಕೋಪಗೊಂಡ ಜಾವೇದ್ ಮಧ್ಯರಾತ್ರಿ ಸಹಚರರೊಡನೆ ಆಗಮಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.