ಮಗು ಸಾವಿನ ಕಾರಣ ತಿಳಿಯಲು ಶವ ಪರೀಕ್ಷೆ
ಕಾಡುಗೊಲ್ಲರ ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ ಸಂಬಂಧ ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ತೋವಿನಕೆರೆ ಬಳಿಯ ಬಡಮುದ್ದಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ. ವಸಂತ, ಸಿದ್ದೇಶ್ ದಂಪತಿಯ ಮಗು ಕಳೆದ ಜುಲೈ 23ರಂದು ಮೃತ ಪಟ್ಟಿತ್ತು. ಮೃತಪಟ್ಟಿದ್ದ ಮಗುವನ್ನ ಸಿದ್ದೇಶ್ ಸ್ವಗ್ರಾಮ ಬಡಮುದ್ದಯ್ಯನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ವೈದ್ಯರು ಮಗುವಿನ ದೇಹದ ಕೆಲ ಅಂಗಾಂಗಳನ್ನ ಸಂಗ್ರಹಿಸಿಕೊಂಡು ಪರೀಕ್ಷೆಗೆ ಕೊಂಡಯ್ದಿದ್ದಾರೆ. ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಉಪಸ್ಥಿತಿಯಲ್ಲಿ ಶವವನ್ನು ಹೊರಗೆ ತೆಗೆಯಲಾಗಿದೆ. ಮಗು ಸಾವಿನ ನಿಜವಾದ ಕಾರಣ ತಿಳಿಯಲು ಶವ ಪರೀಕ್ಷೆ ಮಾಡಲಾಗಿದೆ.