ಅಯೋಧ್ಯೆ ತೀರ್ಪು: ಮುರುಘಾ ಶ್ರೀ ಹೇಳಿದ್ದೇನು?

ಶನಿವಾರ, 9 ನವೆಂಬರ್ 2019 (16:23 IST)
ಭಾರತ ಭಾವೈಕ್ಯತಾ ರಾಷ್ಟ್ರ. ದೇಶದಲ್ಲಿ ಹೃದಯ, ಹೃದಯವನ್ನು ಬೆಸೆಯುವ ಕೆಲಸವಾಗಬೇಕಿದೆ ಅಂತ ಹಿರಿಯ ಸ್ವಾಮೀಜಿ ಹೇಳಿದ್ದಾರೆ.

ಭಾರತೀಯರು ಭಾವಜೀವಿಗಳು, ಧರ್ಮ ಪ್ರಿಯರು. ರಾಮಜನ್ಮಭೂಮಿಯ ಅಯೋಧ್ಯೆ ತೀರ್ಪು
ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿತ್ತು ಎಂದಿದ್ದಾರೆ.

ಧಾರ್ಮಿಕ ಕೇಂದ್ರಗಳು, ಮಠ, ಮಸೀದಿಗಳ ಮೇಲೆ  ಭಾರತೀಯರಲ್ಲಿ ಭಾವನಾತ್ಮಕ  ಗುಣವಿದೆ.  
ಬಾಬ್ರಿ ಮಸೀದಿ ಕೆಡವಿದಾಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಆಗ ವಿವಿಧ ಜಿಲ್ಲೆಗಳಲ್ಲಿ ಶಾಂತಿ ಪಾದಯಾತ್ರೆ ಮಾಡಲಾಗಿತ್ತು.

ಇಂದು ಕೂಡ ದೇಶದಲ್ಲಿ ಅದೇ ಪ್ರಸಂಗವಿದೆ. ತೀರ್ಪು ಯಾರ ಪರವೇ  ಬಂದಿರಲಿ, ವಿಜಯೋತ್ಸವ, ಅಸಂತೋಷ ವ್ಯಕ್ತಪಡಿಸೋದು ಸೂಕ್ತವಲ್ಲ. ನಮ್ಮ ದೇಶ ತುಂಬಾ ದೊಡ್ಡದು. ದೇಶಕ್ಕಿಂತ ಯಾರು ದೊಡ್ಡವರಲ್ಲ ಅಂತ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ