ರಾಜ್ಯಸಭೆ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್

ಶನಿವಾರ, 28 ಮೇ 2016 (20:17 IST)
ರಾಜ್ಯ ಜೆಡಿಎಸ್ ಪಕ್ಷದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಮೊದಲ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್ ಅವರ ಹೆಸರು ಅಂತಿಮಗೊಂಡಿದೆ. 
 
ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಲು ಬಿ.ಎಂ.ಫಾರೂಕ್ ಅವರಿಗೆ 10 ಪಕ್ಷೇತರ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
 
ಮೊಳಕಾಲ್ಮೂರು ಬಿಎಸ್‌ಆರ್‌ಪಿ ಶಾಸಕ ಎಸ್.ತಿಪ್ಪೇಸ್ವಾಮಿ, ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್‌.ಪಾಟೀಲ್, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್, ಬೀದರ್ ಜಿಲ್ಲೆಯ ಕೆಎನ್‌ಪಿ ಶಾಸಕ ಅಶೋಕ್, ಖೇನಿ, ಕುಡುಚಿ ಕ್ಷೇತ್ರದ ಬಿಎಸ್‌ಆರ್‌ಪಿಸಿ ಪಕ್ಷದ ಶಾಸಕ ಪಿ.ರಾಜೀವ್. 
 
ಶಹಪೂರ್ ಕ್ಷೇತ್ರದ ಗುರುಪಾಟೀಲ್, ಕಾರವಾರದ ಪಕ್ಷೇತರ ಶಾಸಕ ಸತೀಶ್ ಸೈಲ್, ಬಟ್ಕಳದ ಪಕ್ಷೇತರ ಶಾಸಕ ಮಂಕಾಳ ಸುಬ್ಬವೈದ್ಯ, ಖಾನಾಪೂರ್ ಶಾಸಕ ಅರವಿಂದ್ ಪಾಟೀಲ್ ಮತ್ತು ಕೂಡ್ಲಗಿಯ ಪಕ್ಷೇತರ ಅಭ್ಯರ್ಥಿ ಬಿ. ನಾಗೇಂದ್ರ್ ಅವರು  ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ