ಬಿ.ಎಸ್. ಯಡಿಯೂರಪ್ಪಗೆ ಬಿಗ್ ಶಾಕ್ ನೀಡಿದ ಬಿ.ಶ್ರೀರಾಮುಲು

ಶನಿವಾರ, 25 ಜನವರಿ 2020 (20:40 IST)
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ಸಂಬಂಧಿಸಿದ ಗೊಂದಲ ಮುಂದುವರಿದಿರುವಂತೆ ಸಿಎಂಗೆ ಸಚಿವರೊಬ್ಬರು ಶಾಕ್ ನೀಡಿದ್ದಾರೆ.

ಮೈತ್ರಿ ಸರಕಾರದಲ್ಲಿ ರಾಜೀನಾಮೆ ನೀಡಿದ 17 ಜನರಿಗೆ ಸಚಿವ ಸ್ಥಾನ ಕೊಡಲೇಬೇಕು. ಹೀಗಂತ ಕೊಟ್ಟಿರುವ ಮಾತನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉಳಿಸಿಕೊಳ್ಳಲಿದ್ದಾರೆ ಅಂತ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಆ ಮೂಲಕ ಸಚಿವ ಸ್ಥಾನದ ಹಗ್ಗಜಗ್ಗಾಟಕ್ಕೆ ಮತ್ತಷ್ಟು ಇಂಬು ನೀಡಿದ್ದಾರೆ ಎನ್ನಲಾಗ್ತಿದೆ. ಆದರೂ ಉಪ ಚುನಾವಣೆಯಲ್ಲಿ ಸೋತಿರೋ ಶಾಸಕರನ್ನು ಸಚಿವರನ್ನಾಗಿ ಮಾಡೋದು ಹೈಕಮಾಂಡ್. ಈ ಕುರಿತು ಹೈ ಕಮಾಂಡ್ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಅಂತ ಸಚಿವ ಶ್ರೀರಾಮುಲು ಹೊಸ ಬಾಂಬ್ ಹಾಕಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ