ಮತ್ತೆ ರಾಜ್ಯದಲ್ಲಿ ಮೂರು ದಿನಗಳ ಕಾಲ ವರುಣಾರ್ಭಟ

ಶನಿವಾರ, 27 ನವೆಂಬರ್ 2021 (20:49 IST)
ಬೆಂಗಳೂರು: ಮೂರು ದಿನ ಮತ್ತೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಸೈಕ್ಲೋನ್​​ನಿಂದ ಬೆಂಗಳೂರು ಸುತ್ತಮುತ್ತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಲರ್ಟ್ ವಾರ್ನಿಂಗ್ ನೀಡಿದೆ.
 
ಕಳೆದರೆಡು ದಿನಗಳಿಂದ ಕೊಂಚ ಮಟ್ಟಿಗೆ ರಿಲೀಫ್ ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸುವ ಸಾಧ್ಯತೆ ಇದ್ದು,  ಇಂದಿನಿಂದ ಮೂರು ದಿನ ಭಾರೀ ಮಳೆ ಆಗಲಿದೆ ಎಂದು ಇಲಾಖೆ ಹೇಳಿದೆ.
 
ಚಂಡಮಾರುತ ಅಪ್ಪಳಿಸುತ್ತೆ ಎಂದು ರಾಜ್ಯ ಸರ್ಕಾರವೇ ಅಲರ್ಟ್ ವಾರ್ನಿಂಗ್ ನೀಡಿದೆ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಇಂದು ಮಧ್ಯಾಹ್ನದ ನಂತರ  ಭಾರೀ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ