ಮಳೆಗೆ ಆಹುತಿಯಾಗುತ್ತಿರುವ ಜನರು!

ಶನಿವಾರ, 27 ನವೆಂಬರ್ 2021 (07:17 IST)
ಈ ಬಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಒಂದು. ಭರ್ಜರಿ ಮಳೆಯಿಂದಾಗಿ ಅಲ್ಲಿ ಅಪಾರ ಹಾನಿಯಾಗಿದೆ.
ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. 16 ಮಂದಿ ನಾಪತ್ತೆಯಾಗಿದ್ದಾರೆ.
 ಈ ಮಧ್ಯೆ ನಿನ್ನೆ ಹೇಳಿಕೆ ಬಿಡುಗಡೆ ಮಾಡಿರುವ ಆಂಧ್ರ ಸಿಎಂ ವೈ.ಎಸ್.ಜಗನ್ ರೆಡ್ಡಿ, ಆಂಧ್ರದ ನಾಲ್ಕು ಜಿಲ್ಲೆಗಳಲ್ಲಿ ಮಳೆಯಿಂದಾದ ಹಾನಿಯ ಬಗ್ಗೆ ಮತ್ತು ಮಳೆ-ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾದವರಿಗೆ ಆಂಧ್ರ ಸರ್ಕಾರ ನೀಡಲಿರುವ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ನವೆಂಬರ್ 19ರಂದು ಅಣ್ಣಮ್ಮಯ್ಯ ಜಲಾಶಯದ ಒಳಹರಿವು 3.2 ಕ್ಯೂಸೆಕ್ಸ್ಆಗಿತ್ತು. ಆಗ ಹೊರಹರಿವು ಕೇವಲ 2.17 ಕ್ಯೂಸೆಕ್ಸ್ ಇತ್ತು. ಹೀಗಾಗಿ ಇದು ಹಲವು ಸ್ವರೂಪದ ಹಾನಿಗಳನ್ನುಂಟುಮಾಡಿತು. ಹಾಗೇ, ಪಿಂಚಾ ಡ್ಯಾಂನ ಒಳಹರಿವು 1.38ಕ್ಯೂಸೆಕ್ಸ್ಗೂ ಮೀರಿದ ಪರಿಣಾಮ ಅದರಿಂದಲೂ ಸಮಸ್ಯೆಯುಂಟಾಯಿತು. 
ಅದರಲ್ಲೂ ಕಳೆದ 50 ವರ್ಷದಲ್ಲಿ ಅಣ್ಣಮ್ಮಯ್ಯ ಜಲಾಶಯ ಇಷ್ಟು ದೊಡ್ಡ ಪ್ರಮಾಣದಲ್ಲಿ ಒಳಹರಿವು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಹಾಗೇ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಗನ್ ರೆಡ್ಡಿ, ಮಳೆಯಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದ ನಾಲ್ಕು ಜಿಲ್ಲೆಗಳಿಗೆ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹಾಗೇ 104 ನಂಬರ್ನ್ನು ಸಹಾಯವಾಣಿಯಾಗಿಸಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ