ಬಕ್ರೀದ್ ಹಬ್ಬದ ಅಂಗವಾಗಿ ಚರ್ಚ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಿದ್ರು!
ಗುರುವಾರ, 23 ಆಗಸ್ಟ್ 2018 (18:46 IST)
ಸ್ವಚ್ಚ ಭಾರತ ಅಭಿಯಾನದಲ್ಲಿ ಮುಸ್ಲಿಂರ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಮೆಥೋಡಿಸ್ಟ್ ಕೇಂದ್ರದ ಮೈದಾನದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಗಮನ ಸೆಳೆಯಿತು.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ಮೆಥೋಡಿಸ್ಟ್ ಕೇಂದ್ರ ಸಭೆಯ ಚರ್ಚ್ ಮೈದಾನದಲ್ಲಿ ಬರ್ಕಿದ್ ಹಬ್ಬದ ರಜೆಯ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ ನಡೆಯಿತು. ರೆವರೆಂಡ್ ಫಾದರ್ ಎಚ್.ಎಚ್.ಸೆಲಮೋನ್ ಅವರ ನೇತೃತ್ವದಲ್ಲಿ ಅಭಿಯಾನ ಮಾಡಲಾಯಿತು.
ದುಪದಾಳ ಗ್ರಾಮ ಹಾಗೂ ಸುತ್ತಮುತ್ತಲಿನ ಚರ್ಚಿನ ಎಲ್ಲ ಮಹಿಳೆಯರು, ಯುವಕರು, ಚಿಕ್ಕ ಮಕ್ಕಳು ಸೇರಿ ಸ್ವಚ್ಚ ಭಾರತ ಆಂದೋಲನದಲ್ಲಿ ಪಾಲ್ಗೊಂಡಿದ್ದರು.
ದೇವರ ಆಲಯವನ್ನು ಸ್ವಚ್ಛ ಮಾಡಲು ಸಂತೋಷ ವ್ಯಕ್ತ ಪಡಿಸಿದ ಜನರು, ಪ್ರತಿ ತಿಂಗಳ ಕೊನೆಯ ದಿನದಂದು ನಗರದಲ್ಲಿ ಸ್ವಚ್ಚತಾ ಅಭಿಯಾನ ಮಾಡುವ ನಿರ್ಣಯ ಕೈಗೊಂಡರು. ಇದೆ ಸಂದರ್ಭದಲ್ಲಿ ಕೊಡಗು, ಕೇರಳದಲ್ಲಿ ಮನೆಗಳನ್ನು ಮಳೆಯಿಂದಾಗಿ ಕಳೆದಕೊಂಡ ಜನತೆಗೋಸ್ಕರ ಪ್ರಾರ್ಥನೆ ಸಲ್ಲಿಸಲಾಯಿತು.