ಈದ್‌ ಪ್ರಾರ್ಥನೆಗೆ ತೆರಳಿದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೇಲೆ ಯುವಕರು ಚಪ್ಪಲಿ ತೂರಿದ್ದು ಯಾಕೆ?

ಗುರುವಾರ, 23 ಆಗಸ್ಟ್ 2018 (10:55 IST)
ಶ್ರೀನಗರ : ಬುಧವಾರ ಈದ್‌ ಪ್ರಾರ್ಥನೆಗೆ ತೆರಳಿದ  ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಮೇಲೆ ಯುವಕರು ಚಪ್ಪಲಿ ಮತ್ತು ಶೂ ಎಸೆದು  ಪ್ರತಿಭಟನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ  ವಾಜಪೇಯಿ ಅವರನ್ನು ಹೊಗಳಿ, ಭಾರತ್‌ ಮಾತಾ ಕೀ ಜೈ, ಜೈ ಹಿಂದ್‌ ಎಂದು ಹಲವು ಬಾರಿ ಘೋಷಣೆ ಮಾಡಿದರು.


ಈ ಹಿನ್ನಲೆಯಲ್ಲಿ ಅವರು ಬುಧವಾರ ಈದ್‌ ಪ್ರಾರ್ಥನೆಗೆ ತೆರಳಿದ ವೇಳೆ ಪ್ರಾರ್ಥನೆ ಆರಂಭಕ್ಕೂ ಮೊದಲೆ ಇಲ್ಲಿನ ಹಜ್ರತ್‌ಬಲ್‌ ಪ್ರಾರ್ಥನಾ ಸ್ಥಳದ ಬಳಿ ಸೇರಿದ್ದ ಯುವಕರು, ಅಲ್ಲಿಗೆ ಆಗಮಿಸಿದ ಫಾರೂಕ್‌ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಚಪ್ಪಲಿ ಮತ್ತು ಶೂಗಳನ್ನು ತೂರಿದರು. ತಕ್ಷಣ  ಫಾರೂಕ್‌ ಅವರು  ಸ್ಥಳದಿಂದ ನಿರ್ಗಮಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ