ಬೆಂಗಳೂರು: ಹೊಸ ವರ್ಷಕ್ಕೆ ಗೆಳೆಯನ ಜೊತೆ ಪಾರ್ಟಿ ಮಾಡಲು ಹೋಗಲು ಪ್ಲ್ಯಾನ್ ಹಾಕಿರುವ ಯುವತಿಯರು ಈ ಸ್ಟೋರಿ ತಪ್ಪದೇ ಓದಬೇಕು. ಬೆಂಗಳೂರಿನಲ್ಲಿ ಈಗ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆಯೇ ಶುರುವಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಹೊಸ ವರ್ಷಕ್ಕೆ ಇನ್ನೂ ಸರಿಯಾಗಿ ಗುರುತು ಪರಿಚಯವಿಲ್ಲದ ಯುವಕನನ್ನು ಬಾಯ್ ಫ್ರೆಂಡ್ ಎಂದು ನಂಬಿ ಪಾರ್ಟಿ ಮಾಡಲು ಹೋಗುವ ಮುನ್ನ ಯುವತಿಯರು ಎಚ್ಚರವಾಗಿರಬೇಕು. ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬೆನ್ನಲ್ಲೇ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆ ಬೆಳಕಿಗೆ ಬಂದಿದೆ.
ಕೆಲವು ವರ್ಷದ ಹಿಂದೆ ವೈಫ್ ಸ್ವಾಪಿಂಗ್ ಎಂಬ ದಂಧೆ ಬೆಳಕಿಗೆ ಬಂದಿತ್ತು. ಅಂದರೆ ತನ್ನ ಪತ್ನಿಯನ್ನು ಪರಪುರುಷನಿಗೆ ಒಪ್ಪಿಸುವುದು, ಪರಪುರುಷನ ಪತ್ನಿಯೊಂದಿಗೆ ತಾನು ಲಲ್ಲೆ ಹೊಡೆಯುವುದು. ಇದೇ ರೀತಿ ಈಗ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆ ಶುರುವಾಗಿದೆ.
ಬೆಂಗಳೂರಿನ ಯುವತಿಯೊಬ್ಬಳು ಈ ಸಂಬಂಧ ಬಾಯ್ ಫ್ರೆಂಡ್ ನಿಂದ ಮೋಸ ಹೋಗಿರುವ ಬಗ್ಗೆ ದೂರು ನೀಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತನನ್ನು ನಂಬಿ ಪಾರ್ಟಿಗೆ ಹೋದಾಗ ಆತ ತನ್ನ ಸ್ನೇಹಿತನ ಜೊತೆ ಕೆಲವು ಸಮಯ ಸಹಕರಿಸಲು ಹೇಳಿದ್ದಾನೆ. ಯುವತಿ ಒಪ್ಪದೇ ಹೋದಾಗ ಸ್ನೇಹಿತರ ಜೊತೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಹರೀಶ್ ಮತ್ತು ಹೇಮಂತ್ ಎಂಬ ಇಬ್ಬರನ್ನು ಬಂದಿಸಿದ್ದಾರೆ. ಈ ವೇಳೆ ಅವರ ಮೊಬೈಲ್ ನಲ್ಲಿ ಸ್ವಿಂಗರ್ಸ್ ಎಂಬ ಹೆಸರಿನಲ್ಲಿ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ವ್ಯಾಟ್ಸಪ್ ಗ್ರೂಪ್ ನ್ನೇ ತೆರೆದಿರುವುದು ಬೆಳಕಿಗೆ ಬಂದಿದೆ. ಯುವತಿಯರ ಸ್ನೇಹ ಸಂಪಾದಿಸುವುದು ಬಳಿಕ ತಮ್ಮ ಸ್ನೇಹಿತರ ಜೊತ ಸಹಕರಿಸಲು ಒತ್ತಾಯಿಸುವುದೇ ಇವರ ಪ್ಲ್ಯಾನ್ ಎಂಬುದು ಗೊತ್ತಾಗಿದೆ. ಹೀಗಾಗಿ ಬಾಯ್ ಫ್ರೆಂಡ್ ಎಂದು ಹಿಂದೆ ಮುಂದೆ ನೋಡದೇ ನಂಬುವ ಮೊದಲು ಯುವತಿಯರು ಎಚ್ಚರವಾಗಿರುವುದು ಉತ್ತಮ.