ಹೊಸ ವರ್ಷಾಚರಣೆ ಬಳಿಕ ಯುವಕ, ಯುವತಿಯರ ವರ್ತನೆ ದೇವರೇ ಕಾಪಾಡಬೇಕು

Krishnaveni K

ಬುಧವಾರ, 1 ಜನವರಿ 2025 (09:33 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೊಸ ವರ್ಷಾಚರಣೆ ಎನ್ನುವುದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಯಾಶನ್ ಆಗಿಬಿಟ್ಟಿದೆ. ಹೊಸ ವರ್ಷದ ಪಾರ್ಟಿಯಲ್ಲಿ ಯುವಕ, ಯುವತಿಯರ ವರ್ತನೆ ದೇವರೇ ಕಾಪಾಡಬೇಕು ಎನ್ನುವ ಮಟ್ಟಿಗಿರುತ್ತದೆ.

ಬೆಂಗಳೂರಿನಲ್ಲಿ ಈ ಬಾರಿಯೂ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿಯೇ ನಡೆದಿದೆ. ಬಿಎಂಟಿಸಿ, ಮೆಟ್ರೋ ಕೂಡಾ ಹೆಚ್ಚುವರಿ ಸೇವೆ ಒದಗಿಸಿ ತಡರಾತ್ರಿ ಪಾರ್ಟಿ ಮಾಡುವವರಿಗೆ ನೆರವಾಗಿದೆ. ಆದರೆ ಪಾರ್ಟಿಯಲ್ಲಿ ಕಂಠ ಪೂರ್ತಿ ಪಾನಮತ್ತರಾದ ಯುವಕ, ಯುವತಿಯರು ರಸ್ತೆಯಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದುದು ಈ ಬಾರಿಯೂ ಕಂಡುಬಂದಿದೆ.

ಬೆಂಗಳೂರಿನ ಚರ್ಚ್ ಸ್ಟ್ರೀಟ್, ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಪಾರ್ಟಿ ಸಂಭ್ರಮ ಜೋರಾಗಿತ್ತು. ಕಂಠ ಪೂರ್ತಿ ಕುಡಿದು ನಡೆಯಲೂ ಆಗದೇ ರಸ್ತೆಯಲ್ಲೇ ಯುವಕ-ಯುವತಿಯರೆನ್ನುವ ಬೇಧವಿಲ್ಲದೇ ತೂರಾಡುತ್ತಿದ್ದರು.

ಕೆಲವೆಡೆ ಎಗ್ಗಿಲ್ಲದೇ ಹಾರಾಡುತ್ತಿದ್ದ ಪಾನಮತ್ತರನ್ನು ನಿಯಂತ್ರಿಸಲು ತಲೆಗೆ ನೀರು ಸುರಿಯುವ ಪರಿಸ್ಥಿತಿ ಬಂದಿತ್ತು. ಯುವತಿಯರೂ ಏನೂ ಕಡಿಮೆಯಿಲ್ಲ. ಬಾಯ್ ಫ್ರೆಂಡ್ ಜೊತೆ ಪಾರ್ಟಿ ಮಾಡಲು ಬಂದು ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಕಿತ್ತಾಡುತ್ತಿದ್ದ ದೃಶ್ಯಗಳೂ ಕಂಡುಬಂದಿವೆ. ಇನ್ನೊಂದೆಡೆ ಪಾನಮತ್ತರಾಗಿ ಅಸಭ್ಯ ವರ್ತನೆ ತೋರಿದ್ದಕ್ಕೆ ಸಾರ್ವಜನಿಕರಿಂದಲೇ ಧರ್ಮದೇಟು ಬಿದ್ದ ಘಟನೆಯೂ ನಡೆದಿದೆ. ಹೊಸ ವರ್ಷಾಚರಣೆ ನೆಪದಲ್ಲಿ ಬೆಂಗಳೂರಿನಲ್ಲಿ ಪ್ರತೀ ವರ್ಷವೂ ಇಂತಹ ದೃಶ್ಯಗಳು ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ