ಕೈ ಪಾಳ್ಯದ ಬಂಜಾರ ಸಮುದಾಯದ ನಾಯಕರಿಂದ ಸರ್ಕಾರದ ವಿರುದ್ದ ಕಿಡಿ

ಮಂಗಳವಾರ, 28 ಮಾರ್ಚ್ 2023 (20:10 IST)
ಜಾತಿ ಜಾತಿ‌ನಡುವೆ ಬೆಂಕಿ ಹಚ್ಚುವ ಕೆಲಸವನ್ನ ಸರ್ಕಾರದವರು ಮಾಡಿದ್ದಾರೆ ಎಂದು ಮಾಜಿ ಸಚಿವ ಮಾಜಿ ಸಚಿವ ಪರಮೇಶ್ವರ್ ನಾಯಕ್ ಆರೋಪಿಸಿದರು.ಈ ಬಗ್ಗೆ ವಿಧಾನಸೌಧದಲ್ಲಿ ಸಚಿವ ಪರಮೇಶ್ವರ್ ನಾಯಕ್, ಕಾಂಗ್ರೆಸ್ ಪರಿಷತ್ ಸಂಚೇತಕ ಪ್ರಕಾಶ್ ರಾಠೋಡ್ ಜಂಟಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿ  ಪರಮೇಶ್ವರ್ ನಾಯಕ್ ಸರ್ಕಾರ ಏಕಾಏಕಿ ಸದಾಶಿವ ಆಯೋಗ ವರದಿ ಜಾರಿ ಮಾಡಿದೆ.ಯಾವುದೇ ಸಮುದಾಯದ ಸಭೆ ಮಾಡದೆ ಜಾರಿ ಮಾಡಿದೆ.ಚುನಾವಣಾ ಹೊಸ್ತಿಲಲ್ಲಿ ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿದೆ. ಸದಾಶಿವ ಆಯೋಗದ ಸಾಧಕ ಬಾಧಕ ಚರ್ಚೆ ಆಗಿಲ್ಲ. ಸಮುದಾಯದ ಜನರು ನೆಮ್ಮದಿಯಿಂದ ಇದ್ರು ಜಾತಿ ಜಾತಿ‌ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಸಂವಿಧಾನದಲ್ಲಿಒಳಮೀಸಲಾತಿಗೆಅವಕಾಶವಿಲ್ಲ ಎಂದು ಸರ್ಕಾರ ವಿರುದ್ದ ಕಿಡಿ ಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ